ಯುವತಿಗೆ ಮೆಸೇಜ್ ಮಾಡಿದ್ದಕ್ಕೆ ಯುವಕನ ಮೇಲೆ ಹಲ್ಲೆ; ಮಗನನ್ನು ಕಿಡ್ನಾಪ್ ಮಾಡಿ ಹತ್ಯೆ ಮಾಡಿದ್ದಾರೆ ಎಂದು ದೂರು ನೀಡಿದ ತಂದೆ!

ಗೋವಿಂದ ರಾಜ್
Published on

ಬೆಂಗಳೂರು: ಹುಡುಗಿಗೆ ಮೆಸೇಜ್ ಮಾಡಿದ್ದಾನೆ ಎಂಬ ಕಾರಣಕ್ಕೆ ನನ್ನ ಮಗನನ್ನು ಅಪಹರಿಸಿ ಕೊಲೆ ಮಾಡಿದ್ದಾರೆ ಎಂಬ ಯುವಕನ ತಂದೆಯೊಬ್ಬರು ಆರೋಪಿಸಿ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಂಧ್ರಹಳ್ಳಿ ನಿವಾಸಿ ಗೋವಿಂದರಾಜ್ ಅಪಹರಣವಾಗಿರುವ ಯುವಕ.

ಅಪಹರಣವಾಗಿರುವ ಯುವಕ ಗೋವಿಂದರಾಜ್, ಮತ್ತಿಕೆರೆಯ 20 ವರ್ಷದ ಯುವತಿಗೆ ಮೆಸೇಜ್ ಮಾಡಿದ್ದ. ಆಕೆ ಕಾಲೇಜಿಗೆ ತೆರಳುವಾಗ ಮೊಬೈಲನ್ನು ಮನೆಯಲ್ಲಿಯೇ ಬಿಟ್ಟು ಹೋಗಿದ್ದಳು. ಈ ವೇಳೆ ಯುವತಿಯ ಸೋದರ ಮಾವ ಅನಿಲ್ ಎಂಬಾತ ಗೋವಿಂದರಾಜ್ ಮಾಡಿದ್ದ ಮೆಸೇಜ್​ ನೋಡಿದ್ದಾನೆ.

ಗೋವಿಂದರಾಜ್ ಮಾಡಿದ್ದ ಮೆಸೇಜ್ ನೋಡಿ, ನಿನ್ನ ಬಳಿ ಮಾತನಾಡಬೇಕು... ಬಾ ಎಂದು ಯುವತಿಯ ಸೋದರಮಾವ ಅನಿಲ್ ಆಂಧ್ರಹಳ್ಳಿ ಬಳಿಗೆ ಕರೆಸಿಕೊಂಡಿದ್ದಾನೆ. ಬಳಿಕ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಇದೀಗ ಗೋವಿಂದರಾಜ್​ನ ತಂದೆ ರಘು ಎಂಬಾತ ನಮ್ಮ ಮಗನನ್ನು ಅಪಹರಿಸಿ ಕೊಲೆ ಮಾಡಿದ್ದಾರೆ ದೂರು ದಾಖಲಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾಣೆಯಾಗಿರುವ ಯುವಕನ ಪತ್ತೆ ಕಾರ್ಯ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net