

ಹೊಸದಿಲ್ಲಿ: ಬಾಲಿವುಡ್ನ ಹ್ಯಾಂಡ್ಸಮ್ ಹೀರೋ ಹೃತಿಕ್ ರೋಷನ್ ಮತ್ತು ನಟಿ ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿರುವ ಬಹುನಿರೀಕ್ಷಿತ ಫೈಟರ್ ಬಿಡುಗಡೆಗೊಂಡು ಇಂದಿಗೆ ಐದು ದಿನಗಳು ಕಳೆದಿವೆ. ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ಹೃತಿಕ್ ಸಿನಿಮಾ, ಇದೀಗ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಇಲ್ಲಿಯವೆರೆಗೆ ಕಂಡ ಒಟ್ಟು ಗಳಿಕೆಯೆಷ್ಟು? ಅದರ ಕಂಪ್ಲೀಟ್ ಡಿಟೇಲ್ಸ್ ಹೀಗಿದೆ.
ಗಣರಾಜ್ಯೋತ್ಸವ ದಿನದಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ಫೈಟರ್ ಚಿತ್ರಕ್ಕೆ ಉತ್ತಮ ಕಿಕ್ ಸ್ಟಾರ್ಟ್ ದೊರೆತಿದ್ದು, ಕೇವಲ ಐದು ದಿನಕ್ಕೆ 200 ಕೋಟಿ ರೂ. ಕ್ಲಬ್ ಸೇರಿದೆ. ಬಾಕ್ಸ್ ಆಫೀಸ್ನಲ್ಲಿ ಮಿಂಚಿನ ಓಟವನ್ನು ಪ್ರದರ್ಶಿಸುತ್ತಿರುವ ಹೃತಿಕ್ ಚಿತ್ರವು ಇದೀಗ ಜಾಗತಿಕವಾಗಿ 225 ಕೋಟಿ ರೂ. ಕಲೆಕ್ಷನ್ ಕಂಡಿದೆ. ಈ ಮೂಲಕ ಶೀಘ್ರವೇ ಹೊಸ ಮೈಲಿಗಲ್ಲು ತಲುಪಲು ಮುಂಚೂಣಿಯಲ್ಲಿದೆ.
ಜಾಗತಿಕವಾಗಿ ಚಿತ್ರವು ಮೊದಲ ದಿನದಿಂದ ಇಲ್ಲಿಯವರೆಗೆ ಗಳಿಸಿದ ಒಟ್ಟು ಗಳಿಕೆಯ ವಿವರ ಹೀಗಿದೆ:
ದಿನ 1 - 36.04 ಕೋಟಿ ರೂ.
ದಿನ 2 - 64.57 ಕೋಟಿ ರೂ.
ದಿನ 3 - 56.19 ಕೋಟಿ ರೂ.
ದಿನ 4 - 52.74 ಕೋಟಿ ರೂ.
ದಿನ 5 - 16.33 ಕೋಟಿ ರೂ.
ಒಟ್ಟು - 225.87 ಕೋಟಿ ರೂ. (ಏಜೆನ್ಸೀಸ್)