ಪ್ರೇಕ್ಷಕರ ಮನಗೆದ್ದ ಫೈಟರ್; ಎರಡನೇ ದಿನ ಗಳಿಸಿದ್ದೆಷ್ಟು

Fighter
Published on

ಮುಂಬೈ: ಹೃತಿಕ್​ ರೋಷನ್​, ದೀಪಿಕಾ ಪಡುಕೋಣೆ ನಟನೆಯ ಸಿದ್ಧಾರ್ಥ್​ ಆನಂದ್ ನಿರ್ದೇಶನದ ಬಹು ನಿರೀಕ್ಷಿತ ಫೈಟರ್ ಚಿತ್ರವು ಪ್ರೇಕ್ಷಕರ ಮನ ಗೆಲುವಲ್ಲಿ ಯಶಸ್ವಿಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಮೊದಲ ದಿನ 22.50 ಕೋಟಿ ರೂ. ಕಮಾಯಿ ಮಾಡಿರುವ ಚಿತ್ರ ಎರಡನೇ ದಿನ 39 ಕೋಟಿ ರೂಪಾಯಿ ಬಾಚಿಕೊಂಡಿದೆ.

ಬಿಡುಗಡೆಯಾದ ಎರಡೇ ದಿನಗಳಲ್ಲಿ 61.50 ಕೋಟಿ ರೂಪಾಯಿ ಕಮಾಯಿ ಮಾಡಿರುವ ಫೈಟರ್​ ಶನಿವಾರದ ಅಂತ್ಯಕ್ಕೆ 100 ಕೋಟಿ ಕ್ಲಬ್​ ಸೇರಲಿದೆ ಎಂದು ಬಾಕ್ಸ್​ಆಫೀಸ್​ ಪಂಡಿತರು ಭವಿಷ್ಯ ನುಡಿದಿದ್ದಾರೆ.

ಬಿಡುಗಡೆಗೂ ಮುನ್ನ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಫೈಟರ್​ ಚಿತ್ರಕ್ಕೆ ಮೊದಲ ದಿನಕ್ಕಿಂತ ಎರಡನೇ ದಿನ ಉತ್ತಮ ರೆಸ್ಪಾನ್ಸ್​ ದೊರೆತಿದೆ. ಮೊದಲನೇ ದಿನಕ್ಕಿಂತ ಎರಡನೇ ದಿನದ ಗಳಿಕೆ ಶೇ.77 ಏರಿಕೆ ಕಂಡು, 39 ಕೋಟಿ ರೂಪಾಯಿ ಬಾಚಿಕೊಂಡಿದೆ. 

ಫೈಟರ್​ ಚಿತ್ರದ ಮೇಲೆ ನಿರೀಕ್ಷೆ ಮೂಡಲು ಸಾಕಷ್ಟು ಕಾರಣಗಳು ಇದ್ದವು. ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ಕಾಂಬಿನೇಷನ್ ಎನ್ನುವ ಕಾರಣಕ್ಕೆ ಜನರಿಗೆ ನಿರೀಕ್ಷೆ ಮೂಡಿತ್ತು. ‘ಪಠಾಣ್’ ಸಿನಿಮಾ ನಿರ್ದೇಶಕ ಸಿದ್ದಾರ್ಥ್ ಆನಂದ್ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಲ್ವಾಮಾ ದಾಳಿ ಮತ್ತು ನಂತರ ನೆರೆಯ ದೇಶದಲ್ಲಿ ಭಾರತ ನಡೆಸಿದ ವೈಮಾನಿಕ ದಾಳಿಯ ಬಗ್ಗೆ ಫೈಟರ್​ ಚಿತ್ರ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net