VIDEO: ಪಬ್​ನಲ್ಲಿ ವ್ಯಕ್ತಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಮಹಿಳೆಯರು!

womenpub
Published on

ಲಖನೌ: ಮಧ್ಯರಾತ್ರಿಯಲ್ಲಿ ವ್ಯಕ್ತಿಯೋರ್ವನನ್ನು ಹಿಡಿದು ಮಹಿಳೆಯರಿಬ್ಬರು ಹಿಗ್ಗಾಮುಗ್ಗಾ ಥಳಿಸುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ.

ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಲಖನೌನ ವಿಭೂತಿಖಂಡ್​ ಎಂಬಲ್ಲಿ. ಪಬ್​ನಲ್ಲಿದ್ದ ಇಬ್ಬರು ಮಹಿಳೆಯರು ಓರ್ವ ವ್ಯಕ್ತಿಯನ್ನು ಹಿಡಿದು ಥಳಿಸುತ್ತಿದ್ದಾರೆ. ಆತ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು, ಈ ಮಹಿಳೆಯರು ಮಾತ್ರ ಬಿಡದೇ ಆತನನ್ನು ಎಳೆದಾಡಿ ಥಳಿಸುತ್ತಲೇ ಇದ್ದಾರೆ.

ಈ ವಿಡಿಯೋದಲ್ಲಿ ವ್ಯಕ್ತಿಯು ಮಾತನಾಡಲು ಪ್ರಯತ್ನಿಸುತ್ತಿರುವಾಗ ಒಬ್ಬ ಮಹಿಳೆ ಹೂವಿನ ಕುಂಡವನ್ನು ಹಿಡಿದು ಹೊಡೆಯಲು ಹೋಗತ್ತಾಳೆ, ಮತ್ತೊಬ್ಬಳು ಥಳಿಸುತ್ತಲೇ ಇರುತ್ತಾಳೆ. ಮಧ್ಯಪ್ರವೇಶಿಸಿದ ವ್ಯಕ್ತಿ ಜಗಳವನ್ನು ಬಿಡಿಸುತ್ತಾನೆ. ಅಂದಹಾಗೆ ಈ ವ್ಯಕ್ತಿಯನ್ನು ಮಹಿಳೆಯರು ಥಳಿಸಿದ್ದೇಕೆ ಎಂಬ ಬಗ್ಗೆ ಕಾರಣ ತಿಳಿದುಬಂದಿಲ್ಲ. ಆದರೂ ಈ ದೃಶ್ಯ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net