ಕಾಂಗ್ರೆಸ್​ನಲ್ಲೇ ತೀವ್ರ ಪೈಪೋಟಿ!

dccb election
ಕೋಲಾರ ಹೊರಲವಯದ ಶಾಸಕರ ಅತಿಥಿ ಗೃಹದಲ್ಲಿ ಸಭೆ ಸೇರಿರುವ ಕಾಂಗ್ರೆಸ್​ ಜನಪ್ರತಿನಿಧಿಗಳು ಹಾಗೂ ಮುಖಂಡರು. ಕೆ.ವೈ.ನಂಜೇಗೌಡ, ಎಂ.ಎಲ್​.ಅನಿಲ್​ ಕುಮಾರ್​, ಶಶಿ, ಚಂಚಿಮಲೆ ರಮೇಶ್​ ಇದ್ದರು.
Published on

ಕಿರುವಾರ ಎಸ್​.ಸುದರ್ಶನ್​ ಕೋಲಾರ

ಕೋಲಾರ-ಚಿಕ್ಕಬಳ್ಳಾಪುರ ಕೇಂದ್ರ ಸಹಕಾರ ಬ್ಯಾಂಕ್​ (ಡಿಸಿಸಿ ಬ್ಯಾಂಕ್​) ಚುನಾವಣೆಯು ಕಾಂಗ್ರೆಸ್​ಗೆ ಪ್ರತಿಷ್ಠೆಯಾಗಿದ್ದು, ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಪ್ರಯತ್ನದಲ್ಲಿ ಆಡಳಿತ ಪಕ್ಷದ ಜನಪ್ರತಿನಿಧಿಗಳ ನಡುವೆಯೇ ಪೈಪೋಟಿ ಏರ್ಪಟ್ಟಿದೆ.

ಬ್ಯಾಂಕ್​ ಚುನಾವಣೆ ನಡೆಯಬಾರದು ಎಂದು ಎರಡೂ ಜಿಲ್ಲೆಯ ಕೆಲ ಮುಖಂಡರು ವಿನಾಕಾರಣ ಅಡ್ಡಿಪಡಿಸಿ, ಕೋರ್ಟ್​ ಮೋರೆ ಹೋಗಿದ್ದರು. ಆದರೆ ಚುನಾವಣೆ ನಡೆಯಲೇಬೇಕು ಎಂದು ಪಣ ತೊಟ್ಟಿದ್ದ ಕೆಲ ಮಾಜಿ ನಿರ್ದೇಶಕರು ತೀವ್ರ ಪೈಪೋಟಿ ನಡೆಸಿ ನ್ಯಾಯಾಲಯದಿಂದಲೇ ಆದೇಶ ತಂದು ಚುನಾವಣೆಗೆ ಅನುಮತಿ ಪಡೆದುಕೊಂಡರು. ದಿನಾಂಕ ಘೋಷಣೆಯಾಗುತ್ತಿದ್ದಂತೆ ಎರಡೂ ಜಿಲ್ಲೆಯಲ್ಲಿ ಎಲ್ಲಿ ನೋಡಿದರೂ ಸಹ ಬ್ಯಾಂಕಿನದೇ ಚರ್ಚೆ ಮುನ್ನೆಲೆೆಯಲ್ಲಿದೆ.

ಚುನಾವಣೆಗೆ ಅನುಮತಿ ದೊರೆಯುತ್ತಿದ್ದಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಅವರು ಅಧಿಸೂಚನೆ ಹೊರಡಿಸಿ, ವೇಳಾಪಟ್ಟಿಯನ್ನು ಪ್ರಕಟಿಸಿದರು. ಬ್ಯಾಂಕಿನ 18 ನಿರ್ದೇಶಕರ ಪೈಕಿ 6 ಮಂದಿ ಅವಿರೋಧ ಆಯ್ಕೆಯಾಗಿದ್ದಾರೆ. ಇನ್ನುಳಿದ 12 ಸ್ಥಾನಗಳಿಗೆ ಮೇ28ರಂದು ನಗರದ ಜೂನಿಯರ್​ ಕಾಲೇಜು ಆವರಣದಲ್ಲಿ ಬೆಳಗ್ಗೆ ಮತದಾನ ನಡೆಯಲಿದೆ.

ನಿರ್ದೇಶಕರಾಗಿ ಕಾಂಗ್ರೆಸ್​ ಶಾಸಕರಾದ ಬಾಗೇಪಲ್ಲಿ ಸುಬ್ಬಾರೆಡ್ಡಿ, ಕೋಲಾರದ ಕೊತ್ತೂರು ಜಿ.ಮಂಜುನಾಥ್​, ಕೆಜಿಎ್​ ಶಾಸಕಿ ರೂಪಕಲಾ ಹಾಗೂ ಮಾಲೂರಿನ ಡಿ.ಎನ್​.ರಮೇಶ್​, ಶಿಡ್ಲಘಟ್ಟ ಎನ್​.ನಾಗರಾಜ್​, ಮಂಚೇನಹಳ್ಳಿ ಜೆ.ವಿ.ಹನುಮೇಗೌಡ ಅವಿರೋಧ ಆಯ್ಕೆಯಾಗಿದ್ದಾರೆ. ಉಳಿದ 12 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಗೆಲ್ಲಲ್ಲೇಬೇಕು ಎಂದು ಪಣತೊಟ್ಟಿರುವ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಹಣದ ಹೊಳೆ ಹರಿಸುತ್ತಿದ್ದಾರೆ. ಇದಕ್ಕೆ ತಕ್ಕಂತೆ ಮಾಲೂರು, ಮುಳಬಾಗಿಲು ಅಭ್ಯರ್ಥಿಗಳು ಮತದಾರರನ್ನು ಪ್ರವಾಸಕ್ಕೆ ಕರೆದೊಯ್ದಿದ್ದು, ನಗದು, ಬೆಲೆ ಬಾಳುವ ಬಹುಮಾನಗಳ ಆಮಿಷ ವೊಡ್ಡುತ್ತಿರುವುದು ಮೂಲಗಳಿಂದ ತಿಳಿದು ಬಂದಿದೆ.

ಎರಡೂ ಜಿಲ್ಲೆಗಳಲ್ಲಿ ಗುಪ್ತ ಸಭೆಗಳನ್ನು ನಡೆಸುತ್ತಿರುವ ಕಾಂಗ್ರೆಸ್​ ಶಾಸಕರು, ವಿಧಾನ ಪರಿಷತ್​ ಸದಸ್ಯರು, ಕಾಂಗ್ರೆಸ್​ ಅಭ್ಯರ್ಥಿಗಳು ಮತದಾರನ್ನು ಸಂಪರ್ಕಿಸಿ ಬೆಂಬಲ ನೀಡುವಂತೆ ಕೋರುತ್ತಿದ್ದಾರೆ.

* ಬ್ಯಾಂಕ್​ ಚುನಾವಣೆಯಿಂದ ಬಿಜೆಪಿ ದೂರ

ಈಗಾಗಲೇ ಅವಿರೋಧ ಆಯ್ಕೆಯಾಗಿದ್ದವರ ಪೈಕಿ ಚಿಕ್ಕಬಳ್ಳಾಪುರದ ಮಂಚೇನಹಳ್ಳಿ ಜೆ.ವಿ.ಹನುಮಂತೇಗೌಡ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಮುಳಬಾಗಿಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕ್ಷೇತ್ರದಿಂದ ವಿ.ರಘುಪತಿರೆಡ್ಡಿ ಹೊರತುಪಡಿಸಿದರೆ ಇನ್ನು ಕಣದಲ್ಲಿರುವವರೆಲ್ಲರೂ ಕಾಂಗ್ರೆಸ್​ ಅಭ್ಯರ್ಥಿಗಳೇ. ಜೆಡಿಎಸ್​ ಬೆಂಬಲಿತ ಅಭ್ಯರ್ಥಿಯಾಗಿ ರುಪತಿ ರೆಡ್ಡಿ ನಾಮಪತ್ರ ಸಲ್ಲಿಸಿ, ಚುನಾವಣೆ ಎದುರಿಸುತ್ತಿದ್ದಾರೆ. ಇವರ ಗೆಲುವಿಗೆ ಶಾಸಕ ಸಮೃದ್ಧಿ ವಿ.ಮಂಜುನಾಥ್​ ಪಣ ತೊಟ್ಟಿದ್ದು, ಮತದಾರರನ್ನು ಸಂಪರ್ಕಿಸಿ ಬೆಂಬಲ ಕೋರುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಿಂದ ಎನ್​ಡಿಎ ಮೈತ್ರಿ ಮೇರೆಗೆ ಚುನಾವಣೆಗಳನ್ನು ಎದುರಿಸಿಕೊಂಡು ಬರುತ್ತಿದ್ದ ಬಿಜೆಪಿ ಬ್ಯಾಂಕ್​ ವಿಚಾರದಲ್ಲಿ ಸಹಕಾರ ಕ್ಷೇತ್ರಕ್ಕೂ ತಮಗೂ ಏನೂ ಸಂಬಂಧವಿಲ್ಲ ಎಂಬಂತೆ ದೂರವಿದೆ. ಚುನಾವಣೆಗೆ ಯಾರೊಬ್ಬರೂ ನಾಮಪತ್ರ ಸಲ್ಲಿಸದೆ ಇರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

* ಕಾಂಗ್ರೆಸ್​ನಲ್ಲಿ ಬಣ ರಾಜಕೀಯ

ಕಣದಲ್ಲಿ ಉಳಿದಿರುವ 29 ಅಭ್ಯರ್ಥಿಗಳೆಲ್ಲ ಕಾಂಗ್ರೆಸ್​ನವರೇ ಆಗಿದ್ದು, ಬಣ ರಾಜಕೀಯ ಹುಟ್ಟುಕೊಂಡಿದೆ.

ಸಚಿವ ಕೆ.ಎಚ್​.ಮುನಿಯಪ್ಪ, ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ಅವರ ಟಬಂಧನ್​ ಗುಂಪುಗಳು ವಿಂಡಗಣೆಯಾಗಿದ್ದು, ಕೆ.ಎಚ್​.ಎಂ ಬಣದವರ ವಿರುದ್ಧ ಕೋಲಾರದಲ್ಲಿ ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಎಂಎಲ್ಸಿ ಅನಿಲ್​ ಕುಮಾರ್​ ಮತ್ತು ಚಿಕ್ಕಬಳ್ಳಾಪುರದಲ್ಲಿ ಸಚಿವ ಎಂ.ಸಿ.ಸುಧಾಕರ್​ ನಿಭಾಯಿಸುತ್ತಿದ್ದಾರೆ. ಇನ್ನು ಟಬಂಧನ್​ ತಂಡವನ್ನು ಬಂಗಾರಪೇಟೆ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಹಾಗೂ ಇತರರು ನಿಭಾಯಿಸುತ್ತಿದ್ದು, ಎರಡೂ ಗುಂಪುಗಳ ನಡುವೆ ಆರೋಪ&ಪ್ರತ್ಯಾರೋಪ ನಡೆಯುತ್ತಿವೆ. ಹೀಗೆ ಈ ಚುನಾವಣೆಯೂ ಸ್ವ ಪಕ್ಷದವರ ನಡುವೆ ಗುಂಪುಗಾರಿಕೆ ಪ್ರದರ್ಶನಕ್ಕೆ ಪ್ರಮುಖ ವೇದಿಕೆಯಾಗಿದೆ.

* ಸ್ವ ಪಕ್ಷದವರ ನಡುವೆಯೇ ಪೈಪೋಟಿ...?

ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅವರು ಬ್ಯಾಂಕ್​ ಪ್ರವೇಶ ಮಾಡದಂತೆ ಒಂದು ತಂಡ ಪಣ ತೊಟ್ಟಿರುವುದರ ಜತೆಗೆ ಕೆ.ಎಚ್​.ಎಂ ಬಣದವರು ಅಧ್ಯಕ್ಷ ಗಾದಿ ಹಿಡಿಯದಂತೆ ಮಾಡಬೇಕು ಎಂದು ತಂತ್ರಗಾರಿಕೆ ನಡೆಸುತ್ತಿದೆ. ಪಟ್ಟಣ ಸಹಕಾರ ಬ್ಯಾಂಕ್​ ಹಾಗೂ ಕೃಷಿಯೇತರ ಸಹಕಾರ ಸಂಗಳ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿರುವ ಬ್ಯಾಲಹಳ್ಳಿ ಗೋವಿಂದಗೌಡ ಅವರನ್ನು ಚುನಾವಣೆಯಲ್ಲಿ ಮಣಿಸಲು ಟಬಂಧನ್​ ಮುಂದಾಗಿದೆ. ಮತ್ತೊಂದು ಕಡೆ ಗೆಲ್ಲಿಸಿಕೊಳ್ಳಬೇಕು ಎಂದು ಶಾಸಕರಾದ ಎಸ್​.ಎನ್​.ನಾರಾಯಣಸ್ವಾಮಿ, ರೂಪಕಲಾ ಅವರು ಪಣತೊಟ್ಟಿದ್ದಾರೆ. ಇಲ್ಲಿ ಯಾರ ಗೇಮ್​ ಪ್ಲಾ$್ಯನ್​ ವರ್ಕ್​ ಆಗುತ್ತದೆ ಎಂಬುದರ ನಡುವೆ ಬ್ಯಾಲಹಳ್ಳಿ ಗೋವಿಂದಗೌಡ ಅವರು ಗೆಲುವಿನ ಹಾದಿಯನ್ನು ಕಂಡುಕೊಂಡಿದ್ದಾರೆ ಎನ್ನಲಾಗಿದೆ.

* ಪ್ರವಿಣ್​ ನಾಮಪತ್ರ ಹಿಂಪಡೆದಿದ್ದು ಚರ್ಚೆಗೆ ಗ್ರಾಸ

ಟಿಎಪಿಸಿಎಂಸ್​ ಕ್ಷೇತ್ರದಿಂದ ಸ್ಪರ್ಧಿಸಿರುವ ಶಾಸಕ ಕೊತ್ತೂರು ಜಿ.ಮಂಜುನಾಥ್​ ಎದುರಾಳಿಯಾಗಿ, ಕೆಜಿಎ್​ ಮಾಜಿ ಶಾಸಕ ವೈ.ಸಂಪಗಿ ಮಗ ಪ್ರವಿಣ್​ ನಾಮಪತ್ರ ಸಲ್ಲಿಸಿದ್ದರು. ಇಬ್ಬರ ನಡುವೆ ತೀವ್ರ ಪೈಪೋಟಿ ಎದುರಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದವು, ಜತೆಗೆ ಬಿಜೆಪಿಯಿಂದ ಕೆಜಿಎ್​ನಿಂದ ನಾಮಪತ್ರ ಸಲ್ಲಿಸಿದ್ದಾರಲ್ಲ ಎಂಬ ಹೆಗ್ಗಳಿಕೆಯಿತ್ತು. ಆದರೆ ಪ್ರವಿಣ್​ ಯಾರ ಗಮನಕ್ಕೂ ತಾರದೆ ನಾಮಪತ್ರ ಹಿಂಪಡೆದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net