ಮಾದಿಗಹಳ್ಳಿಯಲ್ಲಿ ರಾಮದೇವರ ಉತ್ಸವ

14BANNU1
Published on

ಬನ್ನೂರು : ಧನುರ್ಮಾಸದ ಕೊನೆಯ ದಿನದ ಅಂಗವಾಗಿ ಮಾದಿಗಹಳ್ಳಿ ಗ್ರಾಮದಲ್ಲಿ ವಿವಿಧ ಬೀದಿಗಳಲ್ಲಿ ರಾಮ ದೇವರ ಉತ್ಸವ ವಿಜೃಂಭಣೆಯಿಂದ ನಡೆಯಿತು. ಮುಂಜಾನೆಯಿಂದಲೇ ರಾಮ ಮಂದಿರದಲ್ಲಿ ಯುವಕರು ರಾಮ ದೇವರ ಉತ್ಸವಕ್ಕೆ ಸಿದ್ಧತೆ ನಡೆಸಿದರು. ನಂತರ ಮಂಗಳವಾದ್ಯ ಸಮೇತ ಪ್ರಮುಖ ಬೀದಿಗಳಲ್ಲಿ ರಾಮದೇವರ ಮೆರವಣಿಗೆ ಹೊರಟಿತು. ಪ್ರತಿ ಮನೆ ಎದುರು ದೇವರಿಗೆ ಪೂಜೆ ಸಲ್ಲಿಸಲಾಯಿತು.
ಗ್ರಾಮದ ಮುಖಂಡ ಮಲ್ಲು ಮಾತನಾಡಿ, ಧನುರ್ಮಾಸದ ಅವಧಿಯಲ್ಲಿ ರಾಮದೇವರಿಗೆ ಪೂಜೆ ಸಲ್ಲಿಸುವುದು ವಾಡಿಕೆ. ಧನುರ್ಮಾಸ ಇದೀಗ ಮುಗಿದಿದ್ದು, ವಿಜೃಂಭಣೆಯಿಂದ ರಾಮ ದೇವರ ಉತ್ಸವವನ್ನು ಗ್ರಾಮದಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net