ಹಿಂಗಾರು ಋತುವಿಗೆ ರಸಗೊಬ್ಬರ ಸಬ್ಸಿಡಿ, ರೈತರಿಗೆ ಸಿಹಿ

Farmer
Published on

ನವದೆಹಲಿ: ಹಿಂಗಾರು ಋತುವಿಗೆ (ಅಕ್ಟೋಬರ್ 1ರಿಂದ - ಮಾರ್ಚ್ 31) ಅನ್ವಯವಾಗುವಂತೆ ರೈತರಿಗೆ ಫಾಸ್ಪೇಟಿಕ್ ಮತ್ತು ಪೊಟ್ಯಾಸಿಕ್ (ಎನ್​ಪಿಕೆ) ರಸಗೊಬ್ಬರಗಳಿಗೆ ಪೌಷ್ಟಿಕಾಂಶ ಆಧಾರಿತ ಸಬ್ಸಿಡಿ (ಎನ್.ಬಿ.ಎಸ್.) ದರ ನಿಗದಿಗೆ ಕೇಂದ್ರ ರಸಗೊಬ್ಬರ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಈ ಮೂಲಕ ದೇಶದ ರೈತರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ.

ಹಿಂಗಾರು ಋತುವಿನ ಬೆಳೆಗಳಿಗೆ ಸಾರಜನಕ, ರಂಜಕ, ಪೊಟ್ಯಾಶ್ ಮತ್ತು ಗಂಧಕದಂತಹ ವಿವಿಧ ಪೋಷಕಾಂಶಗಳಿಗೆ ಸಬ್ಸಿಡಿ ದರ ಒದಗಿಸಲು ಸರ್ಕಾರ ನಿರ್ಧರಿಸಿದೆ. ಹೆಚ್ಚಿನ ಜಾಗತಿಕ ಬೆಲೆಗಳ ಹೊರತಾಗಿಯೂ ರೈತರಿಗೆ ಸಮಂಜಸವಾದ ದರದಲ್ಲಿ ಮಣ್ಣಿನ ಪೋಷಕಾಂಶಗಳನ್ನು ಸಿಗುವುದನ್ನು ಖಚಿತಪಡಿಸಿಕೊಳ್ಳಲು ಸಹಾಯಧನಕ್ಕೆ ಕೇಂದ್ರ ಈ ತೀರ್ಮಾನ ಕೈಗೊಂಡಿದೆ ಎಂದು ಕೇಂದ್ರ ಪ್ರಸಾರ ಮತ್ತು ಮಾಹಿತಿ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಮಾಹಿತಿ ನೀಡಿದ್ದಾರೆ.

ಘಕಓ ಪ್ರತಿ ಚೀಲಕ್ಕೆ ರೂ 1,470ರ ಹಳೆಯ ದರದಲ್ಲಿ ಮತ್ತು ಖಖಕ (ಸಿಂಗಲ್ ಸೂಪರ್ ಫಾಸ್ಪೇಟ್) ಪ್ರತಿ ಚೀಲ ರೂ 500ಕ್ಕೆ ಲಭ್ಯವಿರಲಿದೆ. Mಟಕ (ಮ್ಯುರಿಯೇಟ್ ಆಫ್ ಪೊಟಾಷ್) ದರ ಪ್ರತಿ ಚೀಲಕ್ಕೆ ರೂ 1,700ರಿಂದ ರೂ 1,655ಕ್ಕೆ ಇಳಿಯಲಿದೆ ಎಂದು ಠಾಕೂರ್ ಹೇಳಿದ್ದಾರೆ. ಪ್ರತಿ ಕಿಲೋ ನೈಟ್ರೋಜೆನ್ (ಎನ್) ರೂ 47.02, ರಂಜಕಕ್ಕೆ ರೂ 20.82, ಪೊಟ್ಯಾಷ್​ಗೆ ರೂ. 2.38 ಮತ್ತು ಸಲ್ಪರ್​ಗೆ ರೂ 1.89 ರೂ.ಗೆ ನಿಗದಿಪಡಿಸಲಾಗಿದೆ.

ಪೌಷ್ಟಿಕಾಂಶ ಆಧಾರಿತ ಸಬ್ಸಿಡಿ ನೀಡುವ ಕ್ರಮದಿಂದ ಕೇಂದ್ರದ ಬೊಕ್ಕಸಕ್ಕೆ ರೂ. 22,303 ಕೋಟಿ ವೆಚ್ಚವಾಗುವ ನಿರೀಕ್ಷೆಯಿದೆ. ಕೈಗೆಟುಕುವ ಬೆಲೆಯಲ್ಲಿ ಈ ರಸಗೊಬ್ಬರಗಳ ಲಭ್ಯತೆ ಖಚಿತಪಡಿಸಿಕೊಳ್ಳಲು ರಸಗೊಬ್ಬರಗಳನ್ನು ಸಬ್ಸಿಡಿ ದರಗಳ ಆಧಾರದ ಮೇಲೆ ರೈತರಿಗೆ ಒದಗಿಸಲಾಗುತ್ತದೆ. ರಸಗೊಬ್ಬರ ತಯಾರಕರು/ಆಮದುದಾರರ ಮೂಲಕ ಕೇಂದ್ರ ಸರ್ಕಾರ 25 ದರ್ಜೆಯ ಪಿ-ಕೆ ರಸಗೊಬ್ಬರಗಳನ್ನು ರೈತರಿಗೆ ಸಬ್ಸಿಡಿ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡುತ್ತಿದೆ. ರಸಗೊಬ್ಬರಗಳ ಅಂತಾರಾಷ್ಟ್ರೀಯ ಬೆಲೆಯಲ್ಲುಂಟಾದ ಬದಲಾವಣೆಗಳಿಂದಾಗಿ ಎನ್​ಪಿಕೆ ರಸಗೊಬ್ಬರಗಳ ಮೇಲಿನ ಸಬ್ಸಿಡಿ ನಿಗದಿಪಡಿಸಲಾಗಿದೆ ಎಂದು ಕೇಂದ್ರ ಹೇಳಿದೆ.

ಜಪಾನ್ ಜತೆ ಒಪ್ಪಂದ

ಭಾರತದಲ್ಲಿ ಸಮರ್ಪಕವಾದ ಸೆಮಿ ಕಂಡಕ್ಟರ್ ಪೂರೈಕೆ ನೆಟ್ವರ್ಕ್ ಸೃಷ್ಟಿಸಲು ಸಹಾಯವಾಗುವಂತೆ ಜಪಾನ್ ದೇಶದ ನೆರವು ಪಡೆಯುವ ಒಪ್ಪಂದಕ್ಕೆ ಕೇಂದ್ರ ಸಂಪುಟ ಒಪ್ಪಿಗೆ ಕೊಟ್ಟಿದೆ. ಸೆಮಿಕಂಡಕ್ಟರ್ ಸಪ್ಲೈ ಚೈನ್ ಉತ್ತಮಗೊಳಿಸಲು ಎರಡೂ ದೇಶಗಳು ಜುಲೈನಲ್ಲಿ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದ್ದವು. ಅಂದಿನಿಂದ ಆರಂಭವಾಗಿ ಐದು ವರ್ಷ ಕಾಲ ಈ ಸಹಕಾರ ಒಪ್ಪಂದ ಚಾಲನೆಯಲ್ಲಿರಲಿದೆ.

ಅಣೆಕಟ್ಟೆ ನಿರ್ಮಾಣ, 2 ರಾಜ್ಯಕ್ಕೆ ಅನುಕೂಲ

ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ನವೀಕರಣ ಇಲಾಖೆಯು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ವೇಗವರ್ಧಿತ ನೀರಾವರಿ ಪ್ರಯೋಜನ ಕಾರ್ಯಕ್ರಮ (ಪಿಎಂಕೆಎಸ್ ವೈ-ಎಐಬಿಪಿ) ಅಡಿಯಲ್ಲಿ ಉತ್ತರಾಖಂಡದ ಬಹು ಉದ್ದೇಶದ ಜಮ್ರಾಣಿ ಆಣೆಕಟ್ಟೆ ಯೋಜನೆಯನ್ನು ಸೇರ್ಪಡೆಗೊಳಿಸಲು ಕೇಂದ್ರ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ಒಪ್ಪಿಗೆ ಸೂಚಿಸಿದೆ. ಅಂದಾಜು 2,584.10 ರೂ. ಕೋಟಿ ವೆಚ್ಚದ ಯೋಜನೆಯನ್ನು 2028ರ ಮಾರ್ಚ್ ಒಳಗಾಗಿ ಪೂರ್ಣಗೊಳಿಸಲು ಉತ್ತರಾಖಂಡಕ್ಕೆ 1,557.18 ರೂ. ಕೋಟಿ ನೆರವನ್ನು ನೀಡಲು ಕೇಂದ್ರ ಮುಂದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net