ಫೆಡ್ ದರ ಸುತ್ತಮುತ್ತ; ಎಷ್ಟು ಏರಿಕೆ?

sdfsdgfh
Published on

ಅಮೆರಿಕದ ಫೆಡರಲ್ ರಿಸರ್ವ್ 2018ರ ನಂತರ ಇದೇ ಮೊದಲ ಬಾರಿ 25 ಮೂಲಾಂಶ ಅಥವಾ 0.25% ಏರಿಕೆ ಮಾಡಿದೆ. ಇದರೊಂದಿಗೆ ಫೆಡರಲ್ ಬಡ್ಡಿದರ ಶೇಕಡ 1.75ರಿಂದ ಶೇಕಡ 2ಕ್ಕೆ ಏರಿಕೆಯಾಗಲಿದೆ ಎಂದು ಫೆಡ್ ಬುಧವಾರ ಘೋಷಿಸಿದೆ.

ಹಣದುಬ್ಬರ ಎಲ್ಲೆ ಮೀರಿತೇ?: ಆರ್​ಬಿಐ ನಿಗದಿಪಡಿಸಿದ್ದ ಶೇಕಡ 6 ಹಣದುಬ್ಬರ ಪ್ರಮಾಣದ ಮಿತಿಯನ್ನು ಮೀರಿದ ಹಣದುಬ್ಬರ ಪ್ರಮಾಣ ಕಳೆದ 2 ತಿಂಗಳು ದಾಖಲಾ ಗಿದೆ. ಜನವರಿಯಲ್ಲಿ ಶೇ.6.01 ಮತ್ತು ಫೆಬ್ರವರಿಯಲ್ಲಿ ಶೇ.6.07 ಚಿಲ್ಲರೆ ಹಣ ದುಬ್ಬರ ಪ್ರಮಾಣ ದಾಖಲಾಗಿತ್ತು. ಆದರೆ, ಇದನ್ನು ಎಲ್ಲೆ ಮೀರಿದ ಹಣದುಬ್ಬರ ಎಂದು ಹೇಳಲಾಗದು.

ಅಮೆರಿಕದ ಫೆಡರಲ್ ರಿಸರ್ವ್ 2018ರ ನಂತರದಲ್ಲಿ ಇದೇ ಮೊದಲ ಸಲ ಬಡ್ಡಿ ದರವನ್ನು 25 ಮೂಲಾಂಶ ಏರಿಕೆ ಮಾಡಿದೆ. ಮಾರುಕಟ್ಟೆಯ ಮೇಲೆ ಇದರ ಪರಿಣಾಮ ಏನು? ಇದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ನ ವಿತ್ತೀಯ ನೀತಿಯ ಮೇಲೆ ಪರಿಣಾಮ ಬೀರುವುದೇ? ಕಿರು ಅವಲೋಕನ ಇಲ್ಲಿದೆ.

ಹಣದುಬ್ಬರ ಪ್ರಮಾಣ: ಅಮೆರಿಕದಲ್ಲಿ ಫೆಬ್ರವರಿ ತಿಂಗಳು ಹಣದುಬ್ಬರ ಪ್ರಮಾಣ 40 ವರ್ಷಗಳಲ್ಲೇ ಗರಿಷ್ಠ ಮಟ್ಟ ಶೇ. 7.9ಕ್ಕೆ ತಲುಪಿ ತಲ್ಲಣ ಸೃಷ್ಟಿಸಿದೆ. 2024ರ ವೇಳೆಗೆ ಹಣದುಬ್ಬರ ಪ್ರಮಾಣ ಶೇ.2ರ ಒಳಗೆ ಬರಲಿದೆ ಎಂಬ ನಿರೀಕ್ಷೆ ಫೆಡರಲ್ ರಿಸರ್ವ್ ವ್ಯಕ್ತಪಡಿಸಿದೆ.

ಮಾರುಕಟ್ಟೆ ಮೇಲಿನ ಪರಿಣಾಮ: ಅಮೆರಿಕದ ಫೆಡ್ ರಿಸರ್ವ್ ದರ ಏರಿಕೆ ಘೋಷಣೆ ಮಾರುಕಟ್ಟೆಗಳ ಮೇಲೆ ಧನಾತ್ಮಕ ಪರಿಣಾಮ ಬೀರಿದೆ. ಅಮೆರಿಕದ ಷೇರುಪೇಟೆ ಶೇಕಡ 2 ಏರಿಕೆ ದಾಖಲಿಸಿದರೆ, ಭಾರತದ ಷೇರುಪೇಟೆ ಶೇಕಡ 1ಕ್ಕಿಂತ ಹೆಚ್ಚು ಏರಿಕೆ ದಾಖಲಿ ಸಿದೆ. ಪ್ರತಿ ಬ್ಯಾರೆಲ್ ಬ್ರೆಂಟ್ ಕಚ್ಚಾ ತೈಲ ದರವೂ 99 ಡಾಲರ್ ಕೆಳಗೇ ಇದೆ.

ಫೆಡ್ ದರ ಮತ್ತು ಪ್ರಾದೇಶಿಕ ಚಿಲ್ಲರೆ ಹಣದುಬ್ಬರ ದರ ಏರಿಸುವ ಫೆಡರಲ್ ರಿಸರ್ವ್ ನಿರ್ಧಾರವು ಆರ್​ಬಿಐನ ವಿತ್ತ ನೀತಿ ಮೇಲೆ ನೇರ ಪರಿಣಾಮ ಬೀರುತ್ತದೆ. ಏಪ್ರಿಲ್ 6-8ರ ನಡುವೆ ಆರ್​ಬಿಐ ವಿತ್ತ ನೀತಿ ಸಮಿತಿ ಸಭೆ ಸೇರಲಿದ್ದು, ದೇಶದ ವಿತ್ತೀಯ ನೀತಿಯ ಪರಾಮರ್ಶೆ ನಡೆಸಲಿದೆ.

ಮಿತಿ ಮೀರುವ ಸನ್ನಿವೇಶ: ಭಾರತದಲ್ಲಿ ಹಣದುಬ್ಬರ ಎಲ್ಲೆ ಮೀರಿದೆ ಎಂದು ಹೇಳಬೇಕಾದರೆ ಎರಡು ಸನ್ನಿವೇಶಗಳನ್ನು ಗಮನಿಸಬೇಕು. ಮೊದಲನೆಯದು ನಿರಂತರ ಮೂರು ತ್ರೖೆಮಾಸಿಕ ಅವಧಿಯಲ್ಲಿ ಹಣದುಬ್ಬರ ಪ್ರಮಾಣ ನಿಶ್ಚಿತ ಗರಿಷ್ಠ ಎಲ್ಲೆಯನ್ನು ಮೀರಬೇಕು. ಅಥವಾ ಎರಡನೆಯದು ಯಾವುದೇ ಮೂರು ತ್ರೖೆಮಾಸಿಕ ಅವಧಿಯಲ್ಲಿ ನಿರಂತರವಾಗಿ ಹಣದಬ್ಬುರ ಸರಾಸರಿ ಕನಿಷ್ಠ ಮಿತಿಯಿಂದ ಕೆಳಕ್ಕೆ ಕುಸಿಯಬೇಕು.

ಯುಕೆನಲ್ಲೂ ಏರಿಕೆ: ಬ್ಯಾಂಕ್ ಆಫ್ ಇಂಗ್ಲೆಂಡ್ ಕೂಡ ಬಡ್ಡಿದರವನ್ನು ಡಿಸೆಂಬರ್ ತಿಂಗಳಿಂದೀಚೆಗೆ ಸತತ ಮೂರನೇ ಅವಧಿಗೆ ಹೆಚ್ಚಿಸುವ ಮುನ್ಸೂಚನೆ ನೀಡಿದೆ. ರಷ್ಯಾ-ಯೂಕ್ರೇನ್ ಸಮರ ಶುರುವಾದ ಬಳಿಕ ಆರ್ಥಿಕತೆಗೆ ಉತ್ತೇಜನ ನೀಡುವುದಕ್ಕಾಗಿ ಬ್ಯಾಂಕ್ ಆಫ್ ಇಂಗ್ಲೆಂಡ್ ಬಡ್ಡಿದರವನ್ನು ಶೇಕಡ 0.75ಕ್ಕೆ ಏರಿಸುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net