ಭಯ ಹುಟ್ಟಿಸಿದ ಮಾಟ, ಮಂತ್ರ; ಪತ್ನಿ ವಿರುದ್ಧವೇ ಠಾಣೆ ಮೆಟ್ಟಿಲೇರಿದ ಉದ್ಯಮಿ

black magic
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ಮಾಟ, ಮಂತ್ರ ಮಾಡಿ ಕುಟುಂಬಕ್ಕೆ ಜೀವ ಭಯ ಹುಟ್ಟಿಸುತ್ತಿರುವುದಾಗಿ ಪತ್ನಿಯ ವಿರುದ್ಧವೇ ಉದ್ಯಮಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೆಸ್ಟ್ ಹೌಸ್ ರಸ್ತೆಯ ಉದ್ಯಮಿ ದೇವ್ ಕುಮಾರ್, ದೂರು ನೀಡಿದ್ದಾರೆ. ಇದರ ಮೇರೆಗೆ ಉದ್ಯಮಿ ಪತ್ನಿ ವೈದ್ಯೆ, ಅತ್ತೆ ಮತ್ತು ಮಾವನ ವಿರುದ್ಧ ಎ್ಐಆರ್ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

2022ರ ಜೂನ್ 1ರಂದು ವೈದ್ಯೆಯನ್ನು ಮದುವೆಯಾಗಿದ್ದೆನೆ. ಇದರ ನಡುವೆ ವಿದೇಶಕ್ಕೆ ಬಿಜಿನೆಸ್ ಟ್ರಿಪ್ ಹೋಗಿ 2023ರ ೆಬ್ರವರಿ 22ರಂದು ವಾಪಸ್ ಮನೆಗೆ ಬಂದಾಗ ಶೌಚಗೃಹದಲ್ಲಿ ಬೂದಿ, ಕರ್ಪೂರ ಹರಡಿ ಪತ್ನಿಯ ಹೆಬ್ಬರಿನಿಂದ ರಕ್ತ ಸೋರುತ್ತಿತ್ತು. ಮನೆಯ ಹಲವು ಕಡೆಗಳಲ್ಲಿ ನಿಂಬೆ ಹಣ್ಣಿನ ಪೀಸುಗಳು, ಪೂಜೆ ಮಾಡಿದ ತೆಂಗಿನ ಕಾಯಿಗಳು ಕಂಡುಬಂದಿದ್ದವು. ಅನುಮಾನ ಬಂದು ಖಾಸಗಿ ತನಿಖಾ ಸಂಸ್ಥೆ ಕಡೆಯಿಂದ ತನಿಖೆ ನಡೆಸಿದೆ. ವರದಿಯಲ್ಲಿ ಅತ್ತಿಗುಪ್ಪೆ ಜ್ಯೋತಿಷಿ ಮತ್ತು ಸ್ಮಶಾನದಲ್ಲಿ ಪೂಜೆ ಮಾಡುವ ಬಾಬು ಎಂಬುವರನ್ನು ಮನೆ ಕರೆಸಿಕೊಂಡು ಮಾಟ, ಮಂತ್ರ ಮಾಡಿರುವುದು ಗೊತ್ತಾಯಿತು.

ಇದಲ್ಲದೆ, ಅಡುಗೆಗೆ ಬೇರೆ ಬೇರೆ ತರಹದ ಎಣ್ಣೆ ಬಳಸುವುದು, ಊಟದಲ್ಲಿ ಬೂದಿ, ಉಗುರು ಬೇರೆಸಿ ಬಡಿಸುವುದು ಮಾಡುತ್ತಿದ್ದಳು. ಇದನ್ನು ಪ್ರಶ್ನಿಸಿದಾಗ ಪತ್ನಿ ಸಬೂಬು ಹೇಳಿ ಸುಮ್ಮನಾಗಿಸುತ್ತಿದ್ದಳು. ನನ್ನ ತಂದೆ ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿದಿದ್ದಾರೆ. ನಮ್ಮ ಮನೆಯ ನಾಯಿ ಸಾವನ್ನಪ್ಪಿದೆ. ಆದರಿಂದ ನನ್ನ ಪತ್ನಿಯ ಮಾಟ, ಮಂತ್ರದಿಂದ ನಮ್ಮ ಕುಟುಂಬದವರಿಗೆ ಜೀವ ಭಯ ಹುಟ್ಟಿಸಿದೆ. ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ದೇವ್ ಕುಮಾರ್ ಉಲ್ಲೇಖಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net