ಚಿತ್ರ ವಿ-ಚಿತ್ರ: ಪಿಪಿಇ ಕಿಟ್ ಧರಿಸಿದ ಫಾದರ್

sudina 3
Published on

ನವದೆಹಲಿ: ಜಗತ್ತಿನ ಬಹುತೇಕ ಕಡೆಗಳಲ್ಲಿ ಲಾಕ್​ಡೌನ್ ಕಾರಣಕ್ಕೆ ಹೆಚ್ಚಿನ ಧಾರ್ವಿುಕ ಕೇಂದ್ರಗಳು ಮುಚ್ಚಲ್ಪಟ್ಟಿವೆ. ಆದರೆ ಈ ಸಂದರ್ಭದಲ್ಲಿ ಉಕ್ರೇನ್​ನ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಸಮೂಹಕ್ಕೆ ಸೇರಿದ ಫಾದರ್ ಯಾರಸ್ಲೋವ್ ರೋಖ್​ವುನ್ ಸುಮ್ಮನೆ ಕುಳಿತಿಲ್ಲ.

ಕೋವಿಡ್ ಸೋಂಕಿತರು ದಾಖಲಾಗಿರುವ ಆಸ್ಪತ್ರೆಗಳಿಗೆ ಅವರು ಪಿಪಿಇ ಕಿಟ್, ಗ್ಲೌಸ್, ಮಾಸ್ಕ್, ಫೇಸ್ ಶೀಲ್ಡ್ ಧರಿಸಿಕೊಂಡು ಓಡಾಡುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಧಾರ್ವಿುಕ, ಅಧ್ಯಾತ್ಮಿಕ ಸಂದೇಶಗಳನ್ನು ತಿಳಿಸಿಕೊಡುತ್ತಿದ್ದಾರೆ.

‘ಇದರಿಂದ ರೋಗಿಗಳು ಶೀಘ್ರವಾಗಿ ಚೇತರಿಕೊಳ್ಳುವುದರ ಜತೆಗೆ ಚಿಕಿತ್ಸೆ ಪಡೆಯುವ ವೇಳೆ ಉಲ್ಲಾಸದಿಂದಿರುತ್ತಾರೆ’ ಎಂಬುದು ರೋಖ್​ವುನ್ ಅನುಭವ. ಮೇ 22ರಿಂದ ಆರಂಭಿಸಿರುವ ಈ ಸೇವೆಯನ್ನು ಅವರು ಮುಂದುವರಿಸಲು ನಿರ್ಧರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net