ತಂದೆಯ ಪ್ರಾಣವನ್ನೇ ತೆಗೆದುಬಿಟ್ಟ ಮಾನಸಿಕ ಅಸ್ವಸ್ಥ ಮಗ!

Crime Symbolic
Published on

ಉತ್ತರಕನ್ನಡ: ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ತನ್ನ ತಂದೆಯನ್ನೇ ಕೊಲೆ ಮಾಡಿದ ಪ್ರಕರಣವೊಂದು ನಡೆದಿದೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಈ ಭೀಕರ ಕೊಲೆ ನಡೆದುಹೋಗಿದೆ.

ಹೊನ್ನಾವರ ತಾಲೂಕಿನ ಕರ್ಕಿ ತೊಪ್ಪಲಕೇರಿ ಗ್ರಾಮದಲ್ಲಿ ಕೊಲೆ ನಡೆದಿದೆ. ಪಾಂಡುರಂಗ ಮೇಸ್ತ (62) ಕೊಲೆಯಾದ ದುರ್ದೈವಿ. ಈತನ ಪುತ್ರ ಭರತ್ ಮೇಸ್ತ (26) ಕೊಲೆ ಆರೋಪಿ. ಮಾನಸಿಕ ಅಸ್ವಸ್ಥನಾಗಿದ್ದ ಈತ ಕೆಲವು ದಿನಗಳಿಂದ ಮಾತ್ರೆ ಸೇವಿಸಲು ಹಠ ಮಾಡುತ್ತಿದ್ದು, ಇಂದು ತಂದೆಯನ್ನೇ ಕೊಲೆ ಮಾಡಿದ್ದಾನೆ.

ತಂದೆ-ಮಗನ ನಡುವೆ ನಿತ್ಯ ಜಗಳವಾಗುತ್ತಿತ್ತು ಎನ್ನಲಾಗಿದೆ. ಇಂದು ತಂದೆ ದನದ ಕೊಟ್ಟಿಗೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಚಾಕುವಿನಿಂದ ಇರಿದದ್ದಲ್ಲದೆ, ಸಲಾಕೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಹೊನ್ನಾವರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net