ಮನೆಯಲ್ಲಿ ಯಾರಿಗೂ ಹೇಳದೆ ಹೊರಹೋದಳು ಎಂಬ ಕಾರಣಕ್ಕೆ ಪುತ್ರಿಯನ್ನೇ ಹತ್ಯೆಗೈದ ಪಾಪಿ ತಂದೆ!

Untitled design - 2023-08-11T165054.318
Published on

ಅಮೃತಸರ: ತನ್ನ 20 ವರ್ಷದ ಪುತ್ರಿ ಮನೆಯಲ್ಲಿ ಯಾರಿಗೂ ತಿಳಿಸದೆ ಹೊರಹೋಗಿದ್ದಳು ಎಂಬ ಕಾರಣಕ್ಕೆ ಕುಪಿತಗೊಂಡ ತಂದೆ, ಆಕೆಯನ್ನು ಅಮಾನುಷವಾಗಿ ಹತ್ಯೆಗೈದು, ಮೃತದೇಹವನ್ನು ಬೈಕ್​ನ ಹಿಂಬದಿಗೆ ಕಟ್ಟಿ ಎಳೆದೊಯ್ದ ಘಟನೆ ಪಂಜಾಬ್​ನ ಅಮೃತಸರದಲ್ಲಿ ನಡೆದಿದೆ.

ಘಟನೆಯ ವಿವರ: ಮುಚ್ಚಲ್​ ಎಂಬ ಗ್ರಾಮದಲ್ಲಿ ವಾಸವಿದ್ದ ಬಾವ್​ ಎಂಬ ವ್ಯಕ್ತಿ ತನ್ನ ಮಗಳು ಬುಧವಾರ ಮನೆಯಲ್ಲಿ ತಾನು ಹೊರಗೆ ಹೋಗುತ್ತಿದ್ದೇನೆ ಎಂದು ಯಾರಿಗೂ ಹೇಳದೆ ಹೋದ ವಿಷಯದಿಂದ ತೀವ್ರ ಕುಪಿತಗೊಂಡು, ಗುರುವಾರ ಪುತ್ರಿ ಮನೆಗೆ ಹಿಂದಿರುಗಿದ ವೇಳೆ ಆಕೆಯನ್ನು ಮಾರಾಕಾಸ್ತ್ರಗಳಿಂದ ಹತ್ಯೆ ಮಾಡಿದ್ದಾನೆ.

ಹತ್ಯೆಗೈದ ಬಳಿಕ ಮಗಳ ಮೃತದೇಹವನ್ನು ತನ್ನ ಬೈಕ್​ಗೆ ಕಟ್ಟಿ ಗ್ರಾಮದ ಸುತ್ತಮುತ್ತ ಎಳೆದೊಯ್ದು, ತದನಂತರ ರೈಲ್ವೆ ಹಳಿ ಮೇಲೆ ಎಸೆದಿದ್ದಾನೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಆರೋಪಿಯನ್ನು ಇದೀಗ ಬಂಧಿಸಲಾಗಿದೆ ಎಂದು ಡಿಎಸ್ಪಿ ಕುಲದೀಪ್​ ಸಿಂಗ್​ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net