ಒಂಟಿ ನಳಿಗೆ ಕೋವಿಯಿಂದ ಮಗನನ್ನೇ ಗುಂಡಿಟ್ಟು ಕೊಂದ!

Son
Published on

ಕೊಡಗು: ಕೌಟುಂಬಿಕ ಕಲಹವೊಂದು ಕೊಲೆಯವರೆಗೆ ತಲುಪಿದ ಪ್ರಕರಣವೊಂದು ನಡೆದಿದೆ. ಅಂದರೆ ಇಲ್ಲೊಂದು ಕಡೆ ತಂದೆಯೇ ಮಗನನ್ನು ಗುಂಡಿಟ್ಟು ಕೊಲೆ ಮಾಡಿರುವ ಪ್ರಕರಣ ನಡೆದಿದೆ.

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮರಗೋಡು ಗ್ರಾಮ‌ ಪಂಚಾಯಿತಿ ವ್ಯಾಪ್ತಿಯ ಕಟ್ಟೆಮಾಡು ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಂದೇಟಿರ ನಿರನ್ (28) ಕೊಲೆಗೀಡಾದ ಯುವಕ. ಈತನ ತಂದೆ ನಂದೇಟಿರ ಚಿಟ್ಟಿಯಪ್ಪ (58) ಕೊಲೆ ಆರೋಪಿ.

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಈ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ತಂದೆ ತನ್ನ ಬಳಿ ಇರುವ ಒಂಟಿ ನಳಿಗೆ ಕೋವಿಯಿಂದ ಶೂಟ್ ಮಾಡಿ ಕೊಲೆ ಮಾಡಿದ್ದಾನೆ. ಸ್ಥಳಕ್ಕೆ‌ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಆರೋಪಿ ಪೊಲೀಸರಿಗೆ ಶರಣಾಗಿದ್ದು, ವಿಚಾರಣೆ ನಡೆಯತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net