ಯುವವಾಹಿನಿ ಮೂಡುಬಿದಿರೆ ಘಟಕ ಅಧ್ಯಕ್ಷ ಗಿರೀಶ್ ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಿದರು. ಭಾರತೀಯ ವಿಕಾಸ ಟ್ರಸ್ಟ್ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಕೊಲ್ಯ ತರಬೇತಿ ಕುರಿತು ಮಾಹಿತಿ ನೀಡಿದರು. ಕೆನರಾ ಬ್ಯಾಂಕ್ ಅಮೂಲ್ಯ ಆರ್ಥಿಕ ಸಾಕ್ಷರತಾ ಯೋಜನೆ ಸಮಾಲೋಚಕ ಲತೀಶ್ ಮಾತನಾಡಿದರು. ಯುವವಾಹಿನಿ ಮೂಡುಬಿದಿರೆ ಘಟಕ ಸಂಘಟನಾ ನಿರ್ದೇಶಕ ಅಶೋಕ್, ಘಟಕದ ಕೋಶಾಧಿಕಾರಿ ಜಯಶೀಲಾ, ತರಬೇತುದಾರರಾದ ಅನಿತಾ ಆನಂದ್ ಒಂಟಿಕಟ್ಟೆ ಉಪಸ್ಥಿತರಿದ್ದರು. ವೀಚೀಶ್ ಕೌಶಲ್ಯಪರ ತರಬೇತಿ ಕೇಂದ್ರದ ನಿರ್ದೇಶಕಿ ಶುಭಲಕ್ಷ್ಮೀ ಸ್ವಾಗತಿಸಿದರು. ಪವಿತ್ರಾ ಸರಸ್ವತಿ ನಿರೂಪಿಸಿದರು.