ರಾಸುಗಳಿಗೆ ದೃಷ್ಟಿ ತೆಗೆದ ರೈತರು

SRP Kittchu
ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಬಳಿ ಸೋಮವಾರ ರೈತರು ತಮ್ಮ ರಾಸುಗಳು ಹಾಗೂ ಜಾನುವಾರುಗಳನ್ನು ಹಿಡಿದು ಕಿಚ್ಚು ಹಾಯಿಸಿದರು.
Published on

ಶ್ರೀರಂಗಪಟ್ಟಣ: ಸುಗ್ಗಿ ಹಬ್ಬದ ಸಂಕ್ರಾಂತಿ ಪ್ರಯುಕ್ತ ತಾಲೂಕಿನಾದ್ಯಂತ ಸೋಮವಾರ ರಾಸುಗಳು ಹಾಗೂ ರೈತರ ಸಾಕುಪ್ರಾಣಿಗಳನ್ನು ಕಿಚ್ಚು ಹಾಯಿಸಿ ಸಂಭ್ರಮಿಸಲಾಯಿತು.


ತಾಲೂಕಿನ ಪ್ರತಿ ಗ್ರಾಮಗಳಲ್ಲೂ ರೈತರು ತಮ್ಮ ರಾಸುಗಳನ್ನು ತೊಳೆದು ವಿಶೇಷವಾಗಿ ಅಲಂಕರಿಸಿದ್ದರು. ಕಿಚ್ಚು ಹಾಯಿಸಿದ ನಂತರ ಎತ್ತು, ಹಸುಗಳಿಗೆ ದೃಷ್ಟಿ ತೆಗೆದರು. ಇನ್ನು ಹೆಣ್ಣು ಮಕ್ಕಳು ಹಾಗೂ ಚಿಣ್ಣರು ಹೊಸ ಬಟ್ಟೆ ಧರಿಸಿ ಸಂಭ್ರಮಿಸಿದರು. ನೆರೆ-ಹೊರೆಯವರಿಗೆ ಎಳ್ಳು-ಬೆಲ್ಲ ಹಂಚಿ ಪರಸ್ಪರ ಶುಭ ಕೋರುತ್ತಿದ್ದ ದೃಶ್ಯ ಕಂಡುಬಂತು.

ವಿವಿಧೆಡೆ ಕಿಚ್ಚು: ತಾಲೂಕಿನ ಬೆಂ-ಮೈ ರಾಷ್ಟ್ರೀಯ ಹೆದ್ದಾರಿಯ ಬಾಬುರಾಯನ ಕೊಪ್ಪಲು, ಕೆ.ಶೆಟ್ಟಹಳ್ಳಿ, ಶ್ರೀನಿವಾಸ ಅಗ್ರಹಾರ, ಕಿರಂಗೂರು, ದರಸಗುಪ್ಪೆ, ಮರಳಾಗಾಲ, ದೊಡ್ಡಪಾಳ್ಯ, ಮಂಡ್ಯಕೊಪ್ಪಲು, ಅರಕೆರೆ, ಗೆಂಡೆಹೊಸಹಳ್ಳಿ, ಪಾಲಹಳ್ಳಿ ಸೇರಿದಂತೆ ಬೆಂಗಳೂರು- ಮೈಸೂರು ಹೆದ್ದಾರಿ, ಶ್ರೀರಂಗಪಟ್ಟಣ- ಪಾಂಡವಪುರ ಹೆದ್ದಾರಿ, ಶ್ರೀರಂಗಪಟ್ಟಣ- ಕೆಆರ್‌ಎಸ್ ಹೆದ್ದಾರಿ, ಶ್ರೀರಂಗಪಟ್ಟಣ-ಬನ್ನೂರು ರಸ್ತೆಗಳಲ್ಲಿ ರಾಸುಗಳನ್ನು ಕಿಚ್ಚು ಹಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net