

ರಾಣೆಬೆನ್ನೂರ: ತಾಲೂಕಿನಲ್ಲಿ ಕಳಪೆ ಬೀಜ ಮಾರಾಟ ಸಂರ್ಪೂಣ ಬಂದ್ ಮಾಡಿಸಬೇಕು. ಈಗಾಗಲೇ ರೈತರಿಗೆ ಕಳಪೆ ಬೀಜ ಕೊಟ್ಟು ಮೋಸ ಮಾಡಿರುವ ಮಳಿಗೆದಾರರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಕಾರ್ಯಕರ್ತರು ಭಾನುವಾರ ತಾಲೂಕಿನ ಚಳಗೇರಿ ಟೋಲ್ನಾಕಾ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ರೈತ ಸಂದ ಸಂಟನಾ ಕಾರ್ಯದಶಿರ್ ರವೀಂದ್ರಗೌಡ ಪಾಟೀಲ ಮಾತನಾಡಿ, ರೈತರಿಗೆ ಕಳಪೆ ಬೀಜ ನೀಡಿದ್ದರಿಂದ ಬಹಳಷ್ಟು ರೈತರು ಬಿತ್ತನೆ ಮಾಡಿದ ಬೀಜ ಮೊಳಕೆಯೊಡೆದೆ ಹಾಳಾಗಿವೆ. ಇದರಿಂದ ರೈತರು ಬಹಳಷ್ಟು ಆಥಿರ್ಕವಾಗಿ ನಷ್ಟ ಅನುಭವಿಸಿದ್ದಾರೆ. ಅವರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸಬೇಕು. ಕಳಪೆ ಬೀಜ ಮಾರಾಟ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಸ್ಪಂದಿಸಿದ ಸಚಿವ ಶಿವಾನಂದ ಪಾಟೀಲ, ಕಳಪೆ ಬೀಜ ಮಾರಾಟ ಮಾಡಿರುವ ನಾಲ್ಕು ಮಳಿಗೆಗಳನ್ನು ಈಗಾಗಲೇ ಜಪ್ತಿ ಮಾಡಲಾಗಿದೆ. ಅವರ ಪರವಾನಗಿ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗಿದೆ. ರೈತರಿಗೆ ಪರಿಹಾರ ಕೊಡಿಸುವ ಕುರಿತು ಚಚಿರ್ಸಲಾಗುವುದು ಎಂದರು.
ರೈತರಾದ ಈರಣ್ಣ ಹಲಗೇರಿ, ಸುರೇಶ ಮಲ್ಲಾಪುರ, ಹರಿಹರಗೌಡ ಪಾಟೀಲ, ಶಿವಣ್ಣ ಮಾಕನೂರ, ನಂದೀಶ ಪಾಟೀಲ, ಸೋಮನಗೌಡ ಪಾಟೀಲ, ಭೀಮಣ್ಣ ಓಲೇಕಾರ, ಬಸಪ್ಪ ಯಲ್ಲಕ್ಕನವರ, ಮಲಕಪ್ಪ ಲಿಂಗದಹಳ್ಳಿ ಮತ್ತಿತರರು ಇದ್ದರು.