ವಿದ್ಯುತ್ ಗುತ್ತಿಗೆದಾರರ ಮುಷ್ಕರಕ್ಕೆ ರೈತ ಸಂಘ ಬೆಂಬಲ

raita sanga protest
ಮೆಸ್ಕಾಂನ ವಿದ್ಯುತ್ ಗುತ್ತಿಗೆದಾರರ ಸಂಘದ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಪದಾಧಿಕಾರಿಗಳು ಹರಿಗೆಯ ವಿದ್ಯುತ್ ಭವನದ ಎದುರು ನಡೆಸಿದ ಧರಣಿಗೆ ಎಚ್.ಆರ್.ಬಸವರಾಜಪ್ಪ ನೇತೃತ್ವದಲ್ಲಿ ರೈತ ಸಂಘ ಬೆಂಬಲ ನೀಡಿತು. ಟಿ.ಎಂ ಚಂದ್ರಪ್ಪ, ಹಿಟ್ಟೂರು ರಾಜು, ಎಸ್.ಶಿವಮೂರ್ತಿ,ಕೆ.ರಾಘವೇಂದ್ರ, ಗುರುಶಾಂತ, ಸಿ.ಚಂದ್ರಪ್ಪ, ಶಿವಮೂರ್ತಿ, ಜಿ.ಎನ್.ಪಂಚಾಕ್ಷರಿ, ಹನುಮಂತಪ್ಪ ಇದ್ದರು.
Published on

ಶಿವಮೊಗ್ಗ: ವಿದ್ಯುತ್ ಗುತ್ತಿಗೆದಾರರ ಸಂಘದ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲಾ ಸಮಿತಿ ಪದಾಧಿಕಾರಿಗಳ ಮುಷ್ಕರಕ್ಕೆ ರೈತ ಸಂಘ ಬೆಂಬಲ ನೀಡಿತು.

ಶಿವಮೊಗ್ಗ ಹಾಗೂ ಚಿಕ್ಕಮಗಳೂರು ವೃತ್ತ ವ್ಯಾಪ್ತಿಯ ಮೆಸ್ಕಾಂನಲ್ಲಿ ಬೃಹತ್ ಕಾಮಗಾರಿಯ ಟೆಂಡರ್ ಕರೆದಿರುವ ಬಗ್ಗೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಲು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ನೇತೃತ್ವದಲ್ಲಿ ಗುತ್ತಿಗೆದಾರರ ಧರಣಿಗೆ ಸಂಪೂರ್ಣ ಬೆಂಬಲ ಸೂಚಿಸಲಾಯಿತು.
ರಾಜ್ಯ ಉಪಾಧ್ಯಕ್ಷರಾದ ಟಿ.ಎಂ ಚಂದ್ರಪ್ಪ, ಹಿಟ್ಟೂರು ರಾಜು, ಜಿಲ್ಲಾಧ್ಯಕ್ಷ ಎಸ್.ಶಿವಮೂರ್ತಿ, ಕಾರ್ಯಾಧ್ಯಕ್ಷ ಕೆ.ರಾಘವೇಂದ್ರ, ಕಾರ್ಯದರ್ಶಿ ಗುರುಶಾಂತ, ಶಿವಮೊಗ್ಗ ತಾಲೂಕು ಅಧ್ಯಕ್ಷ ಸಿ.ಚಂದ್ರಪ್ಪ, ಕಾರ್ಯದರ್ಶಿ ಶಿವಮೂರ್ತಿ, ಭದ್ರಾವತಿ ತಾಲೂಕು ಅಧ್ಯಕ್ಷ ಜಿ.ಎನ್.ಪಂಚಾಕ್ಷರಿ, ಪ್ರಧಾನಕಾರ್ಯದರ್ಶಿ ಹನುಮಂತಪ್ಪ ಮತ್ತು ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net