

| ರಾಘವ ಶರ್ಮ ನಿಡ್ಲೆ ನವದೆಹಲಿ
ದಿಲ್ಲಿ-ಉತ್ತರ ಪ್ರದೇಶ-ಗಾಜಿಪುರ್ ಗಡಿ ಭಾಗದಿಂದ ಸುಪ್ರಸಿದ್ಧ ಅಕ್ಷರಧಾಮ ದೇಗುಲ ಫ್ಲೈ ಓವರ್ ಮಾರ್ಗವಾಗಿ ಐಟಿಒ ಸರ್ಕಲ್ಗೆ (ಇನ್ಕಂ ಟ್ಯಾಕ್ಸ್ ಆಫೀಸ್) ಬಂದ ವೇಳೆ ಎರ್ರಾಬಿರ್ರಿಯಾಗಿ ಟ್ರ್ಯಾಕ್ಟರ್ ಓಡಿಸಿ ಮೃತಪಟ್ಟಿದ್ದ 27 ವರ್ಷದ ಯುವಕ ನವರೀತ್ ಸಿಂಗ್, ಆಸ್ಟ್ರೇಲಿಯಾದಿಂದ ಮೂರ್ನಾಲ್ಕು ತಿಂಗಳ ಹಿಂದೆಯಷ್ಟೇ ಭಾರತಕ್ಕೆ ವಾಪಸಾಗಿದ್ದ ಎಂದು ಗೊತ್ತಾಗಿದೆ. ಆಸ್ಟ್ರೇಲಿಯಾದಲ್ಲಿದ್ದಾಗಲೇ ವಿವಾಹವಾಗಿದ್ದ ಆತ, ಭಾರತದಲ್ಲಿ ಮದುವೆಯ ಸಂಭ್ರಮಾಚರಣೆಗಾಗಿ ವಾಪಸಾಗಿದ್ದ. ಉತ್ತರ ಪ್ರದೇಶದ ರಾಮ್ುರ್ ಜಿಲ್ಲೆಯಲ್ಲಿ ಆತನ ಕುಟುಂಬಸ್ಥರು ನೆಲೆಸಿದ್ದಾರೆ. ಸಂಬಂಧಿಕರೊಂದಿಗೆ ದೆಹಲಿಗೆ ಬಂದು ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ.
ಮಧ್ಯಾಹ್ನ 1.30ರ ವೇಳೆಗೆ ಐಟಿಒಗೆ ಟ್ರ್ಯಾಕ್ಟರ್ನಲ್ಲಿ ಧಾವಿಸಿದ ನವರೀತ್ ಸಿಂಗ್, ಬ್ಯಾರಿಕೇಡ್ಗಳ ಮೇಲೆ ಟ್ರಾ್ಯಕ್ಟರ್ ಓಡಿಸಿದ್ದಲ್ಲದೆ, ತಡೆಯಲು ಯತ್ನಿಸಿದ ಪೊಲೀಸ್ ಸಿಬ್ಬಂದಿ ಮೇಲೂ ಚಲಾಯಿಸಲು ಮುಂದಾಗಿದ್ದ. ಕೆಲ ಪೊಲೀಸರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಟ್ರಾ್ಯಕ್ಟರ್ ಬ್ಯಾರಿಕೇಡ್ಗೆ ಬಡಿದು, ಪಲ್ಟಿಯಾಗಿ ಆತನ ಮೇಲೆ ಹರಿದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆದರೆ, ನವರೀತ್ನನ್ನು ಪೊಲೀಸರು ಗುಂಡೇಟಿನಿಂದ ಕೊಂದಿದ್ದಾರೆ ಎಂದು ಸುದ್ದಿ ಹಬ್ಬಿಸಿದ ಹಿನ್ನೆಲೆಯಲ್ಲಿ ಕ್ರೋಧಗೊಂಡಿದ್ದ ಯುವ ಹೋರಾಟಗಾರರು ಮತ್ತೊಮ್ಮೆ ಪೊಲೀಸರ ಮೇಲೆ ಟ್ರಾ್ಯಕ್ಟರ್ ಓಡಿಸಲು ಮುಂದಾಗಿದ್ದರು. ಆತನ ಸಾವಿಗೆ ಅಪಘಾತವೇ ಕಾರಣ ಎಂದು ಶವಪರೀಕ್ಷೆ ವರದಿ ಕೂಡ ಹೇಳಿದೆ. ‘ನವರೀತ್ನನ್ನು ‘ಹುತಾತ್ಮ ರೈತ’ ಎಂದು ಬಣ್ಣಿಸಿರಬಹುದು. ಆದರೆ, ಈ ಪರಿಯಲ್ಲಿ ಟ್ರ್ಯಾಕ್ಟರ್ ಓಡಿಸಿ, ಪೊಲೀಸರನ್ನು ಹತ್ಯೆ ಮಾಡಲು ಯತ್ನಿಸಿದ್ದನ್ನು ‘ಹೋರಾಟ’ ಎಂದು ಹೇಗೆ ಕರೆಯುತ್ತಾರೋ ನನಗೆ ಅರ್ಥವಾಗುತ್ತಿಲ್ಲ’ ಎಂದು ವಿಜಯವಾಣಿ ಜತೆ ಮಾತನಾಡಿದ ಕರ್ನಾಟಕ ಮೂಲದ ದಿಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಆಕ್ರೋಶ ಹೊರಹಾಕಿದರು.
‘ಇಡೀ ಸಿಖ್ ಸಮುದಾಯ ಹೆಮ್ಮೆಪಡುವಂಥ ಸಾಧನೆಯನ್ನು ನನ್ನ ಮೊಮ್ಮಗ ಮಾಡಿದ್ದಾನೆ. ಹಿಂದೆ ಕೆಂಪುಕೋಟೆಯಲ್ಲಿ ಖಾಲ್ಸಾ ಧ್ವಜ ಹಾರಿತ್ತು. ಈಗ ನಿಶಾನ್ ಸಾಹಿಬ್ ಧ್ವಜ ಹಾರಿದೆ’ ಎಂದು ಅಜ್ಜ ಮಹಾಲ್ ಸಿಂಗ್ ಶ್ಲಾಘಿಸುತ್ತಿರುವುದು ಕಂಡುಬಂದಿದೆ.
ಕಿಸಾನ್ ಗಣತಂತ್ರ ಪರೇಡ್ ವೇಳೆ ಕೆಂಪುಕೋಟೆ ಮೇಲೇರಿ ನಿಶಾನ್ ಸಾಹಿಬ್ ಹಾರಿಸಿದಾತನಿಗೆ ಸಿಖ್ ಫಾರ್ ಜಸ್ಟೀಸ್ ಸಂಘಟನೆ -ಠಿ; 2.56 ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ. ಕೆಂಪುಕೋಟೆಗೆ ಮುತ್ತಿಗೆ ಹಾಕಿ ಧ್ವಜ ಹಾರಿಸಿದಂತೆ, ಬಜೆಟ್ ಅಧಿವೇಶನದ ದಿನ ಸಂಸತ್ ಭವನಕ್ಕೂ ಮುತ್ತಿಗೆ ಹಾಕಿ ಎಂದು ಸಿಖ್ ಫಾರ್ ಜಸ್ಟೀಸ್ ವಿಡಿಯೋ ಸಂದೇಶದಲ್ಲಿ ಕರೆ ನೀಡಿದೆ.
ಮೂರು ಕೃಷಿ ಕಾನೂನುಗಳು ರೈತರ ಆದಾಯವನ್ನು ಗಣನೀಯವಾಗಿ ಹೆಚ್ಚಿಸುವುದಕ್ಕೆ ಪೂರಕವಾಗಿದೆ. ಅದು ರೈತರ ಮಾರುಕಟ್ಟೆ ಅವಕಾಶವನ್ನು ವಿಸ್ತರಿಸಿದೆ. ಮಂಡಿಗಳ ಹೊರತಾಗಿ ಮುಕ್ತ ಮಾರುಕಟ್ಟೆಯಲ್ಲೂ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದೆ.
| ಗೀತಾ ಗೋಪಿನಾಥ್ ಐಎಂಎಫ್ ಮುಖ್ಯ ಆರ್ಥಿಕ ತಜ್ಞೆ
ಕೇಂದ್ರ ಮುಂಗಡಪತ್ರ ಮಂಡನೆ ದಿನವಾದ ಫೆ.1ರಂದು ಸಂಸತ್ ಚಲೋ ನಡೆಸುವ ಆಲೋಚನೆ ಇಲ್ಲ. ಬದಲಾಗಿ ಜನವರಿ 30ರಂದು ದೇಶಾದ್ಯಂತ ಪ್ರತಿಭಟನೆ, ನಿರಶನ, ಸಾರ್ವಜನಿಕ ರ್ಯಾಲಿಗಳು ನಡೆಯಲಿವೆ.
| ದರ್ಶನ್ ಪಾಲ್ ರೈತ ನಾಯಕ