

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
ರೈತ ಈ ದೇಶದ ಆಸ್ತಿ. ತಾವು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಲಾಭ ಮಧ್ಯವರ್ತಿಗಳ ಪಾಲಾಗುತ್ತಿದೆ. ಬೆಳೆದ ಬೆಲೆಯ ದರವನ್ನು ರೈತರು ನಿಗದಿ ಪಡಿಸಿ ನೇರವಾಗಿ ಗ್ರಾಹಕರಿಗೆ ದೊರಕುವಂತಾಗಬೇಕು ಎಂದು ಉಡುಪಿ ಕೃಷಿ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಮೋಹನ್ ರಾಜ್ ಹೇಳಿದರು.
ಬೆನಗಲ್ ತರಕಾರಿ ಬೆಳೆಗಾರರ ಸೌಹಾರ್ದ ಸೊಸೈಟಿ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾನುವಾರ ಮಾತನಾಡಿದರು.
ಸಂಘದ ಅಧ್ಯಕ್ಷ ಶಂಕರ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ನಬಾರ್ಡ್ ಕೋ ಆಡಿನೇಟರ್ ಡಾ.ಹರೀಶ್ ಜೋಶಿ, ಸಂಘದ ಉಪಾಧ್ಯಕ್ಷ ಶೇಖರ ಮರಕಾಲ, ಮುಖ್ಯಕಾರ್ಯನಿರ್ವಹಣಾಧಿಕಾರಿ ನಾಗರಾಜ ಉಳಿತಾಯ, ಕೋಶಾಧಿಕಾರಿ ವಸಂತ ನಾಯ್ಕ, ನಿರ್ದೇಶಕರಾದ ದಯಾನಂದ ನಾಯ್ಕ, ಸುರೇಶ ನಾಯ್ಕ, ಅರ್ಜುನ ನಾಯ್ಕ, ಚಂದ್ರ ನಾಯ್ಕ, ಗೋಪಾಲ ನಾಯ್ಕ, ಜ್ಯೋತಿ ಬೆನಗಲ್, ಸಿಬ್ಬಂದಿ ನಿಶ್ಮಿತಾ, ಧಾರ್ಮಿಕ ಮುಖಂಡ ಉಮೇಶ ನಾಯ್ಕ, ತರಕಾರಿ ಬೆಳೆಗಾರರು ಉಪಸ್ಥಿತರಿದ್ದರು. ವಸಂತ ನಾಯ್ಕ ಒಳಬೈಲು ಸ್ವಾಗತಿಸಿ, ಸುರೇಶ್ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ನಿಶ್ಮಿತಾ ವರದಿ ವಾಚಿಸಿ, ಅರ್ಜುನ ನಾಯ್ಕ ವಂದಿಸಿದರು.