ಶಂಭು ಗಡಿಯಲ್ಲಿ ಬ್ಯಾರಿಕೇಡ್​ ತೆಗೆದು ಹಾಕಿದ ರೈತರು.. ಪೊಲೀಸರಿಂದ ಅಶ್ರುವಾಯು ಪ್ರಯೋಗ | Tear gas

tear gas
Published on

ನವದೆಹಲಿ: ಬೆಳೆಗಳ ಕನಿಷ್ಠ ಬೆಂಬಲ ಬೆಲೆಗೆ(ಎಂಎಸ್​ಪಿ) ಕಾನೂನತ್ಮಾಕ ಖಾತರಿ ನೀಡುವಂತೆ ಹರಿಯಾಣ ಅಂಬಾಲ ಗಡಿಯಿಂದ ದೆಹಲಿಗೆ ಪಾದಯಾತ್ರೆ ಮಾಡಲು ಆರಂಭಿಸಿದ ರೈತರ ಮೇಲೆ​ ಶುಕ್ರವಾರ ಪೊಲಿಸರು ಅಶ್ರುವಾಯು(Tear gas) ಪ್ರಯೋಗ ಮಾಡಿದ್ದಾರೆ. ಈ ಘಟನೆಯಲ್ಲಿ ಹಲವು ರೈತರು ಗಾಯಗೊಂಡಿದ್ದಾರೆ.

ಬ್ಯಾರಿಕೇಡ್​ ಮುರಿಯಲು ರೈತರು ಮುಂದಾದ ಹಿನ್ನೆಲೆ ಅಶ್ರುವಾಯು ದಾಳಿ ಮಾಡಲಾಗಿದೆ. ಅಲ್ಲದೆ, ಈ ಘಟನೆಯಲ್ಲಿ ಒಬ್ಬ ರೈತರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಮಧ್ಯಾಹ್ನ ಸುಮಾರು ಒಂದು ಗಂಟೆಗೆ ಕಿಸನ್​ ಮಜ್ದೂರ್​ ಮೋರ್ಚಾ, ಸಂಯುಕ್ತ ಕಿಸಾನ್​ ಮೋರ್ಚಾ ರೈತರ ಸಂಘಟನೆಗಳ ನೇತೃತ್ವದಲ್ಲಿ 101 ರೈತರು ಜಾಥಾ ಆರಂಭವಾಗಿದೆ. ಶಂಭು ಗಡಿಯಿಂದ ಆರಂಭವಾದ ಪಾದಯಾತ್ರೆ ದೆಹಲಿ ಗಡಿಯತ್ತ ತೆರಳಿದೆ. ರೈತರ ಪ್ರತಿಭಟನೆ ತಡೆಯುವ ಹಿನ್ನಲೆ ಮುಂಚಿತವಾಗಿ ಬ್ಯಾರಿಕೇಡ್​ಗಳನ್ನು ಆಳವಾಡಿಸಲಾಗಿದೆ. ಪ್ರತಿಭಟನೆಯಲ್ಲಿ ಮಧ್ಯಪ್ರವೇಶಿಸಿದ ಪೊಲೀಸರು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ(BNSS) ಸೆಕ್ಷನ್​ ಜಾರಿ ಹಿನ್ನೆಲೆ ಪ್ರತಿಭಟನೆ ಹಿಂದಕ್ಕೆ ತಗೆದುಕೊಳ್ಳುವಂತೆ ಕೋರಿದ್ದಾರೆ. ಇದಕ್ಕೆ ಒಪ್ಪದ ರೈತರು ಬ್ಯಾರಿಕೇಡ್​ಗಳನ್ನು ಮುರಿದು ಹೋಗಲು ಪ್ರಯತ್ನಿಸಿ ಇಂದು ಈ ಘರ್ಷಣೆ ನಡೆದಿದೆ ಎಂದು ವರದಿಗಳು ಉಲ್ಲೇಖಿಸಿವೆ. ಶಂಭು ಗಡಿಯಲ್ಲಿ ಕಳೆದ ಒಂಬತ್ತು ತಿಂಗಳಿಂದ ರೈತರು ಬಿಡಾರ ಹೂಡಿದ್ದಾರೆ.

ರೈತರ ಹೋರಾಟ ಹಿನ್ನೆಲೆ ಅಂಬಾಲ ಜಿಲ್ಲಾಡಳಿತ ಸುತ್ತಮುತ್ತಲಿನ 11 ಗ್ರಾಮಗಳಲ್ಲಿ ಇಂಟರ್​​ನೆಟ್​ ಮತ್ತು ಎಸ್​ಎಂಎಸ್ ಸೇವೆಗಳನ್ನು ಸ್ಥಗಿತಗೊಳಿಸಿದ್ದು, ಇದೇ ಡಿ.09ರ ತನಕ ಜಾರಿಯಲ್ಲಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net