ರೈತರ ಹೋರಾಟಕ್ಕೆ ವಿದೇಶಗಳಿಂದ ಬರುತ್ತಿದೆ ಹಣ! ಫೋರೆಕ್ಸ್​ ಇಲಾಖೆಯಿಂದ ಬಂತು ನೋಟಿಸ್​!

former
Published on

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಗಡಿ ಭಾಗದಲ್ಲಿ ನಡೆಯುತ್ತಿರುವ ರೈತ ಹೋರಾಟ 25ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿನಿತ್ಯ ಹೋರಾಟಗಾರರ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದ್ದು, ಹೋರಾಟ ನಿರತ ಗುಂಪುಗಳಲ್ಲಿ ಒಂದು ಗುಂಪಿಗೆ ವಿದೇಶಗಳಿಂದ ಹಣ ಬರುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ಕುರಿತಾಗಿ ವಿದೇಶಿ ವಿನಿಮಯ ಇಲಾಖೆಯು ನೋಟಿಸ್​ ನೀಡಿರುವುದಾಗಿಯೂ ತಿಳಿಸಲಾಗಿದೆ.

ಭಾರತೀಯ ಕಿಸಾನ್​ ಯೂನಿಯನ್​ಗೆ ವಿದೇಶದಿಂದ ಹಣ ಬರುತ್ತಿರುವುದಾಗಿ ಹೇಳಲಾಗಿದೆ. ಈ ಕುರಿತಾಗಿ ವಿದೇಶಿ ವಿನಿಮಯ ಇಲಾಖೆಯು ಪಂಜಾಬ್​ ಮತ್ತು ಮೊಘಾ ಜಿಲ್ಲೆಯ ಪಂಜಾಬ್​ ಮತ್ತು ಸಿಂಧ್​ ಬ್ಯಾಂಕ್​ ಅಧಿಕಾರಿಗಳಿಗೆ ಮಿಂಚಂಚಿ ಕಳುಹಿಸಿದೆ. ಕಳೆದ ಎರಡು ತಿಂಗಳಲ್ಲಿ 8ರಿಂದ 9 ಲಕ್ಷ ಹಣ ವರ್ಗಾವಣೆ ಆಗಿದೆ. ವಿದೇಶಿ ವಿನಿಮಯದ ಬಗ್ಗೆ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳುವಂತೆ ತಿಳಿಸಲಾಗಿದೆ. ಬ್ಯಾಂಕಿನ ಅಧಿಕಾರಿಗಳು ರೈತ ಸಂಘಟನೆಗೆ ಕರೆ ಮಾಡಿ ಈ ವಿಚಾರವನ್ನು ತಿಳಿಸಿದ್ದಾರೆ.

ವಿದೇಶಗಳಲ್ಲಿರುವ ಪಂಜಾಬಿಗಳು ರೈತ ಹೋರಾಟಕ್ಕೆ ಬೆಂಬಲ ತೋರುವ ನಿಟ್ಟಿನಲ್ಲಿ ಹಣ ವರ್ಗಾವಣೆ ಮಾಡುತ್ತಿದ್ದಾರೆ. ಅದರಲ್ಲಿ ತಪ್ಪೇನಿದೆ ಎಂದು ಭಾರತೀಯ ಕಿಸಾನ್​ ಯೂನಿಯನ್​ನ ಪ್ರಧಾನ ಕಾರ್ಯದರ್ಶಿ ಸುಖದೇವ್​ ಸಿಂಗ್​ ಕೊಕ್ರಿ ಕಲಾನ್ ಹೇಳಿದ್ದಾರೆ. ಕೇಂದ್ರ ಸರ್ಕಾರವು ರೈತ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಈ ರೀತಿಯ ಉಪಾಯಗಳನ್ನು ಮಾಡುತ್ತಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್​ ದೂರಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net