ವಿಷಮಯವಾದ ಕೆರೆಯಲ್ಲಿ ತೇಲುತ್ತಿವೆ ಸಾವಿರಾರು ಸತ್ತ ಮೀನುಗಳ ರಾಶಿ!

kere fish
Published on

ಕೋಲಾರ: ಕಿಡಿಗೇಡಿಗಳು ಕೆರೆಯ ನೀರಿಗೆ ವಿಷಪ್ರಾಶಾನ ಮಾಡಿ ಸಾವಿರಾರು ಮೀನುಗಳನ್ನು ಕೊಂದ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಗಡುಡಕೆಂಪನಹಳ್ಳಿ ಗ್ರಾಮದ ಕೆರೆಯಲ್ಲಿ ನಡೆದಿದೆ.

ಚಿಕ್ಕಪ್ಪಯ್ಯ ಎಂಬುವವರು ಯಳೇಸಂದ್ರ ಗ್ರಾಮ ಪಂಚಾಯಿತಿ ವತಿಯಿಂದ ಹರಾಜಿಗೆ ಪಡೆದುಕೊಂಡಿದ್ದ ಕೆರೆಯಲ್ಲಿ ಸುಮಾರು 70 ಸಾವಿರ ಮೀನು ಮರಿಗಳನ್ನು ಬಿಟ್ಟಿದ್ದರು. ಎಂದಿನಂತೆ ಮಂಗಳವಾರ (ನ.01) ರಂದು ಕೆರೆಯ ಬಳಿ ಚಿಕ್ಕಪ್ಪಯ್ಯ ಹೋದಾಗ, ಕೆರೆಯಲ್ಲಿ ಮೀನುಗಳು ಸತ್ತು ಬಿದ್ದಿರುವುದು ತಿಳಿದು ಬಂದಿದೆ.

ಕೆರೆಯ ನೀರಿಗೆ ವಿಷಪ್ರಾಶಾನ ಮಾಡಿದ ಹಿನ್ನೆಲೆ ಈ ರೀತಿ ಮೀನುಗಳು ಸತ್ತು ಬಿದ್ದಿವೆ ಎಂದು ಆರೋಪಿಸಿದ ಚಿಕ್ಕಪ್ಪಯ್ಯ, ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಬಂಗಾರಪೇಟೆ ಪೊಲೀಸ್ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net