More

    ಕೊಹ್ಲಿಗೆ ಬಾಬರ್ ಮಾಡಿದ್ದ​ ಟ್ವೀಟ್​ ಕಾಪಿ ಮಾಡಿ ತಿರುಗೇಟು: ಅಮಿತ್​ ಮಿಶ್ರಾ ಮೇಲೆ ಅಫ್ರಿದಿಗೆ ಯಾಕಿಷ್ಟು ಕೋಪ?

    ಇಸ್ಲಮಾಬಾದ್​: ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಪಾಕಿಸ್ತಾನದ ತಂಡದ ನಾಯಕ ಬಾಬರ್​ ಅಜಾಮ್ ಕಳಪೆ ಫಾರ್ಮ್​ನಲ್ಲಿದ್ದಾರೆ. ಮೂರು ಪಂದ್ಯದಲ್ಲಿ ಕ್ರಮವಾಗಿ 0, 4 ಹಾಗೂ 4 ರನ್​ಗಳನ್ನು ಮಾತ್ರ ಗಳಿಸಿದ್ದಾರೆ. ಪಾಕ್​ ತಂಡ ಸೆಮಿಫೈನಲ್​ ಪ್ರವೇಶ ಪಡೆಯದೆ ಸೂಪರ್​ 12 ಲೀಗ್​ ಹಂತದಲ್ಲೇ ಟೂರ್ನಿಯಿಂದ ಹೊರಗುಳಿಯಲು ಬಾಬರ್​ ಕಳಪೆ ಪ್ರದರ್ಶನವೇ ಕಾರಣವಾಗಿದೆ.

    ಕಳೆದ ಭಾನುವಾರ ಟೀಮ್​ ಇಂಡಿಯಾದ ಮಾಜಿ ಸ್ಪಿನ್ನರ್​ ಅಮಿತ್ ಮಿಶ್ರಾ ಬಾಬರ್​ ಕುರಿತು ಟ್ವೀಟ್​ ಮಾಡಿ, “ಇದು ಕೂಡ ಸರಿದು ಹೋಗುತ್ತವೆ.​ ದೃಢವಾಗಿರಿ” ಎಂದಿದ್ದರು. ಇದೇ ಮಾತನ್ನು ಬಾಬರ್​ ಈ ವರ್ಷದ ಆರಂಭದಲ್ಲಿ ವಿರಾಟ್​ ಕೊಹ್ಲಿ ಕಳಪೆ ಫಾರ್ಮ್​ನಲ್ಲಿದ್ದಾಗ ಬಾಬರ್​ ಟ್ವೀಟ್​ ಮಾಡಿದ್ದರು. ಯಥಾವತ್​ ಬಾಬರ್​ ಟ್ವೀಟ್​ ಅನ್ನು ನಕಲು ಮಾಡಿ, ಬಾಬರ್​ಗೆ ಮಿಶ್ರಾ ಟ್ವೀಟ್​ ಮಾಡಿ ಕಾಲೆಳೆದಿದ್ದಾರೆ.

    ಈ ಬಗ್ಗೆ ಪಾಕ್​ನ ಸಾಮಾ ಟಿವಿ ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿರುವ ಪಾಕ್​ ತಂಡದ ಮಾಜಿ ನಾಯಕ ಶಾಹೀದ್​ ಅಫ್ರಿದಿ, ನೀವು ತೆಗೆದುಕೊಳ್ಳುತ್ತಿರುವ ಹೆಸರು ಅಮಿತ್ ಮಿಶ್ರಾ, ಅವರು ಕೂಡ ಭಾರತಕ್ಕಾಗಿ ಆಡಿದ್ದಾರೆಯೇ? ಅವರೇನು ಸ್ಪಿನ್ನರ್​ ಅಥವಾ ಬ್ಯಾಟ್ಸ್​ಮನ್​ ಆ ಎಂದು ವ್ಯಂಗ್ಯವಾಡಿದ್ದಾರೆ.

    ಮಿಶ್ರಾ ಅವರು ಐಪಿಎಲ್‌ನಲ್ಲಿ ಡೆಕ್ಕನ್ ಚಾರ್ಜರ್ಸ್‌ ಪರ ಆಡಿದ ಎಡಗೈ ಸ್ಪಿನ್ನರ್ ಎಂದು ಆ್ಯಂಕರ್​ ಅಫ್ರಿದಿಗೆ ನೆನಪಿಸಿದಾಗ, ಏನು ಸಮಸ್ಯೆಯಿಲ್ಲ, ನಾವು ಮುಂದುವರಿಯೋಣ ಎಂದು ಪ್ರತಿಕ್ರಿಯೆ ನೀಡಿದರು.

    ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಪಾಕಿಸ್ತಾನ ಕೇವಲ 2 ಅಂಕಗಳನ್ನು ಗಳಿಸಿದೆ. ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ವಿರುದ್ಧ ಇನ್ನೆರೆಡು ಪಂದ್ಯ ಬಾಕಿ ಇದೆ. ಆದರೆ, ಪಾಕ್​ನ ಸೆಮಿಫೈನಲ್​ ಕನಸು ಈಗಾಗಲೇ ನುಚ್ಚು ನೂರಾಗಿದೆ. (ಏಜೆನ್ಸೀಸ್​)

    ಲವ್​ ಬ್ರೇಕಪ್​ಗೆ ಒಪ್ಪದ ಪ್ರಿಯಕರನಿಗೆ ವಿಷವುಣಿಸಿದ ಪ್ರೇಯಸಿ! ಸಾಯೋ ಮುನ್ನ ಯುವಕ ಆಡಿದ ಮಾತು ಮನಕಲಕುವಂತಿದೆ

    ಮೊರ್ಬಿ ಸೇತುವೆ ಕುಸಿತ ಪ್ರಕರಣ: ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 141ಕ್ಕೆ ಏರಿಕೆ, 9 ಜನರ ಬಂಧನ

    VIDEO| ದಣಿದ ಮಾವುತನನ್ನು ಸಂತೈಸಿದ ಆನೆ! ಭಾವನಾತ್ಮಕ ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇ ಬೇರೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts