ರೈತರು ಧೈರ್ಯದಿಂದ ಮುನ್ನುಗ್ಗಲಿ

Published on

ರಾಯಬಾಗ: ರೈತರು ಒಗ್ಗಟ್ಟಾಗಿ ಹೋರಾಡಿದರೆ ಮಾತ್ರ ಸರ್ಕಾರ ಬೇಡಿಕೆಗಳಿಗೆ ಸ್ಪಂದಿಸುತ್ತದೆ ಎಂದು ರೈತ ಸಂಘದ ಮುಖಂಡ ಬಾಳಯ್ಯ ಹೀರೆಮಠ ಹೇಳಿದರು.

ತಾಲೂಕಿನ ನಿಲಜಿ ಗ್ರಾಮದ ಪಾಟೀಲ ತೋಟದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರೈತ ಸಭೆಯಲ್ಲಿ ಮಾತನಾಡಿ, ರೈತರು ಧೈರ್ಯದಿಂದ ಮುನ್ನುಗ್ಗಬೇಕು. ಬೆಳೆ ಹಾನಿ ಪರಿಹಾರ ಕೂಡಲೇ ನೀಡಬೇಕು. ಗ್ರಾಮೀಣ ಭಾಗದಲ್ಲಿ ಹಗಲು ಸಮಯದಲ್ಲಿ 7 ಗಂಟೆ ತ್ರೀಫೆೇಸ್ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿದರು.

ಕರುನಾಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಬಾಲಚಂದ್ರ ಬನವಿ, ರೈತ ಸಂಘದ ಜಿಲ್ಲಾ ಸಂಚಾಲಕ ಗುರುನಾಥ ಹೆಗಡೆ ಮಾತನಾಡಿದರು. ರೈತ ಸಂಘದ ತಾಲೂಕಾಧ್ಯಕ್ಷ ಶಿವಾಜಿ ಪಾಟೀಲ, ರಮೇಶ ಪಾಟೀಲ, ಪ್ರಕಾಶ ಪಾಟೀಲ, ಕುಮಾರ ಕೂಗೆ, ಶೋಭಾ ಕೂಗೆ, ಪುಂಡಲೀಕ ಮಾನೆ, ನಾರಾಯಣ ಧರ್ಮಟ್ಟಿ, ದಾನಪ್ಪ ಬೆಳ್ಳೂರ, ಹನುಮಂತ ಜಾಮಗೌಡರ, ಪುಂಡಲೀಕ ಅಸೋದೆ, ಬಿ.ಎಸ್.ವಿಭೂತಿ, ಕರೆಪ್ಪ ಲಟ್ಟೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net