ರಾಮಪಟ್ಟಣದಲ್ಲಿ ರೈತ ಸಂಘದ ನಾಮಫಲಕ ಅನಾವರಣ

HUN-OCT-19-1(RAMAPATNA RAITH SANGHA)
ಹುಣಸೂರು ತಾಲೂಕು ರಾಮಪಟ್ಟಣದಲ್ಲಿ ರೈತ ಸಂಘದ ಗ್ರಾಮ ಶಾಖೆಯ ನಾಮಫಲಕವನ್ನು ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಅನಾವರಣಗೊಳಿಸಿದರು. ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ಕಾರ್ಯದರ್ಶಿ ಅಗ್ರಹಾರ ರಾಮೇಗೌಡ, ರವಿಗೌಡ, ಸತೀಶ್, ಸಣ್ಣೇಗೌಡ, ರಂಗೇಗೌಡ ಇತರರಿದ್ದರು.
Published on

ಹುಣಸೂರು: ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ರಾಮಪಟ್ಟಣದಲ್ಲಿ ರೈತ ಸಂಘದ ನಾಮಫಲಕ ಅನಾವರಣಗೊಳಿಸಲಾಯಿತು.

ಶನಿವಾರ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾಮಫಲಕ ಅನಾವರಣಗೊಳಿಸಿದ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ರಾಮಪಟ್ಟಣ ಗ್ರಾಮದಲ್ಲಿ ಕಳೆದ 30 ವರ್ಷಗಳಿಂದ ರೈತಪರ ಹೋರಾಟಕ್ಕೆ ಸಕ್ರಿಯವಾಗಿ ಪಾಲ್ಗೊಂಡ ರೈತ ಸಂಘಟನೆ ಇಲ್ಲಿದೆ. ಹುಣಸೂರು ನಗರಕ್ಕೆ ರಾಮಪಟ್ಟಣ ಸಮೀಪವಾಗಿದ್ದರೂ, ಇಲ್ಲಿನ ಯುವಕರು ಪಟ್ಟಣದ ಕಡೆ ಮುಖ ಮಾಡದೇ ಕೃಷಿಯನ್ನು ಉಳಿಸಿಕೊಂಡಿದ್ದಾರೆ. ಲಕ್ಷ್ಮಣತೀರ್ಥ ನದಿಯೂ ನಿಮ್ಮ ಗ್ರಾಮದ ಮೂಲಕ ಹಾದು ಹೋಗುತ್ತದೆ. ದಿ.ಕೆ.ಎಸ್.ಪುಟ್ಟಣ್ಣಯ್ಯ ರೈತ ಸಂಘದ ಶಾಖೆಯನ್ನು ಉದ್ಘಾಟಿಸಿ ನಿಮ್ಮೆಲ್ಲರನ್ನು ಹೋರಾಟಕ್ಕೆ ಪ್ರೇರೇಪಿಸಿದ್ದರು. ಗ್ರಾಮದಲ್ಲಿ ಕೃಷಿಗೆ ಹೆಚ್ಚು ಒತ್ತು ನೀಡುವುದಲ್ಲದೆ ರೈತ ಸಮುದಾಯದ ಏಳಿಗೆಗಾಗಿ ಅತಿ ಹೆಚ್ಚು ರಾಜ್ಯ ವ್ಯಾಪ್ತಿ ಚಳವಳಿಗಳಲ್ಲಿ ಭಾಗವಹಿಸುತ್ತಿರುವುದು ಶ್ಲಾಘನೀಯ ಎಂದರು.

ರೈತ ಸಂಘದ ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ ಮಾತನಾಡಿ, ಹುಣಸೂರು ನಗರದ ಸಂತೆಯಲ್ಲಿ ರೈತರಿಗೆ ಸುಂಕವನ್ನು ವಿಧಿಸಿ ಶೋಷಿಸುತ್ತಿದ್ದುದನ್ನು ವಿರೋಧಿಸಿ ನಡೆದ ಹೋರಾಟದ ವೇಳೆ ರಾಮಪಟ್ಟಣದ ರೈತ ಸಮುದಾಯ ಅತ್ಯಂತ ಪ್ರಭಾವಯುತವಾಗಿ ಹೋರಾಟದಲ್ಲಿ ಪಾಲ್ಗೊಂಡು ಹೋರಾಟ ಯಶಸ್ಸು ಸಾಧಿಸಿತ್ತು. ಇದೀಗ ಗ್ರಾಮದ ಪಕ್ಕದಲ್ಲಿ ಕೃಷಿಯ ಭೂಮಿಯನ್ನು ಪರಿವರ್ತಿಸಿ ನಿವೇಶನಗಳಿಗೆ, ರಿಯಲ್ ಎಸ್ಟೇಟ್ ದಂಧೆಕೋರರು ಬಂದಿದ್ದು. ನೀವೆಲ್ಲರು ಎಚ್ಚೆತ್ತು ಬಂಡವಾಳಶಾಹಿಗಳು ಹಾಗೂ ಭೂಗಳ್ಳರಿಗೆ ಭೂಮಿಯನ್ನು ಅಕ್ರಮಗೊಳಿಸುವವರ ಬಗ್ಗೆ ಎಚ್ಚರ ವಹಿಸುವ ಮೂಲಕ ಭೂಮಿ ಉಳಿಸಿಕೊಳ್ಳಬೇಕು ಎಂದು ಕೋರಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ಗುರುಪುರದ ಆಲಿಜಾನ್, ತಾಲೂಕು ಪ್ರಧಾನ ಕಾರ್ಯದರ್ಶಿ ಅಗ್ರಹಾರ ರಾಮೇಗೌಡ, ತಾಲೂಕು ಉಪಾಧ್ಯಕ್ಷ ಈಶ್ವರೇಗೌಡ, ತಾಲೂಕು ಪದಾಧಿಕಾರಿ ರಾಜೇಗೌಡ, ಗ್ರಾಮಘಟಕ ಅಧ್ಯಕ್ಷ ರವಿಗೌಡ ಹಾಗೂ ಅಗ್ರಹಾರದ ರೈತ ಸಂಘದ ಅಧ್ಯಕ್ಷ ಸತೀಶ್, ಗ್ರಾಮದ ಯಜಮಾನರದ ಸಣ್ಣೇಗೌಡ, ರಂಗೇಗೌಡ, ಕಾಳೇಗೌಡ, ಮೊಗಣ್ಣ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಲ್ಲೇಶ್, ಗ್ರಾಮ ರೈತ ಸಂಘದ ಪದಾಧಿಕಾರಿಗಳು ಸದಸ್ಯರು ಗ್ರಾಮಸ್ಥರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net