ಸಂಘಕ್ಕೆ ರೈತರೇ ಜೀವನಾಡಿ

ಸಂಘಕ್ಕೆ ರೈತರೇ ಜೀವನಾಡಿ
Published on

ಸರಗೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಬಿ ಮಟಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎನ್. ಅಣ್ಣಯ್ಯಸ್ವಾಮಿ ಹೇಳಿದರು.

ತಾಲೂಕಿನ ಬಿ ಮಟಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಮಂಗಳವಾರ ನಡೆದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.

ರೈತರು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ಸಂಘದ ಬೆಳವಣಿಗೆಗೆ ಸಹಕಾರ ನೀಡುವಂತೆ ಮನವಿ ಮಾಡಿದರು. ಮುಖ್ಯಕಾರ್ಯನಿರ್ವಾಹಣಾಧಿಕಾರಿ ಪಿ.ಜಯಕುಮಾರ್ ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ವರದಿ ಮಂಡಿಸಿದರು.

ಸಹಕಾರ ಸಂಘದ ಮೂಲಕ ರಸಗೊಬ್ಬರ ಹಾಗೂ ಕೃಷಿ ಉಪಕರಣ ಮಾರಾಟ ಮಾಡುವಂತೆ ರೈತರು ಸಲಹೆ ನೀಡಿದರು.

ಉಪಾಧ್ಯಕ್ಷ ಎಂ.ಸಿ.ಬೀರೇಗೌಡ, ನಿರ್ದೇಶಕ ಕೆ.ಎಂ.ರಾಜಪ್ಪ, ಗುಣಪಾಲ, ಎಂ.ಬಿ. ಆನಂದ, ಅಜಿತ್ ಕುಮಾರ್, ಎಂ.ಎಸ್. ಮಲ್ಲಿಕಾರ್ಜುನ, ಎಚ್.ಡಿ. ಸ್ವಾಮಿ, ಕೃಷ್ಣನಾಯಕ, ಕೀರಮಾರ, ಶಾರದಮ್ಮ, ಜಯಮ್ಮ, ಹರಿದಾಸ್, ಕೆ.ಟಿ. ಸ್ವಾಮಿ, ಕೆ.ಟಿ. ಮಹದೇವಪ್ಪ, ನಾಗರಾಜು, ಜಿನ್ನಪ್ಪ, ಮಾದಪ್ಪ, ಸಂಘದ ಷೇರುದಾರರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net