ರೈತರು ತಂತ್ರಜ್ಞಾನದತ್ತ ಚಿತ್ತಹರಿಸಿ- ಡಾ. ರಾಘವೇಂದ್ರ ಎಲಿಗಾರ್

Gangavati Agriculture Training
ಗಂಗಾವತಿ ಕೆವಿಕೆ ಸಭಾಂಗಣದಲ್ಲಿ ಕೃಷಿ ವಿಜ್ಞಾನ ಕೇಂದ್ರ ಮತ್ತು ಕೋರ್ ಕಾರ್ಬೋನೆಕ್ಸ್ ಸಲ್ಯೂಶನ್ಸ್ ಸಹಯೋಗದೊಂದಿಗೆ ಆಯೋಜಿಸಿದ್ದ ಕೃಷಿ ತರಬೇತಿ ಕಾರ್ಯಗಾರದಲ್ಲಿ ಕೆವಿಕೆ ಮುಖ್ಯಸ್ಥ ಡಾ.ರಾಘವೇಂದ್ರ ಎಲಿಗಾರ್ ಮಾತನಾಡಿದರು.
Published on

ಗಂಗಾವತಿ: ನೀರು ಮಿತ ಬಳಕೆ ಜತೆಗೆ ಇಳುವರಿ ಹೆಚ್ಚಳದತ್ತ ರೈತರು ಗಮನಹರಿಸಬೇಕೆಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ರಾಘವೇಂದ್ರ ಎಲಿಗಾರ್ ತಿಳಿಸಿದರು.

ನಗರದ ಕೆವಿಕೆ ಸಭಾಂಗಣದಲ್ಲಿ ಕೃಷಿ ವಿಜ್ಞಾನ ಕೇಂದ್ರ ಮತ್ತು ಕೋರ್ ಕಾರ್ಬೋನೆಕ್ಸ್ ಸಲ್ಯೂಶನ್ಸ್ ಸಹಯೋಗದೊಂದಿಗೆ ಸೋಮವಾರ ಆಯೋಜಿಸಿದ್ದ ಕೃಷಿ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಸುಧಾರಿತ ತಂತ್ರಜ್ಞಾನದತ್ತ ರೈತರು ಚಿತ್ತ ಕೊಡಿ. ತಜ್ಞರ ಸಲಹೆಯಂತೆ ಕೃಷಿ ಪದ್ಧತಿಯನ್ನು ಅಳವಡಿಸಿ ಎಂದು ಸಲಹೆ ನೀಡಿದರು.

ಸಲ್ಯೂಶನ್ ರಾಜ್ಯ ಮುಖ್ಯಸ್ಥ ಸೆಂಥಿಲ್ ಕುಮಾರ, ಕೃಷಿ ಅಧಿಕಾರಿ ಶ್ರೀಧರಕುಮಾರ, ರೈತ ಪ್ರಮುಖರಾದ ಸರ್ವೋತ್ತಮ ರೆಡ್ಡಿ, ಸಂಸ್ಥೆ ಪ್ರತಿನಿಧಿಗಳಾದ ವಿ.ಚಕ್ರಪಾಣಿ, ಗಿರಿಯಪ್ಪ ದಾವಣಗೆರೆ, ದಯಾನಂದ ಕುಮಾರ, ಆರ್.ಎಚ್.ಪಾಟೀಲ್, ರಘು, ನವೀನ್, ಮಂಜುನಾಥ ಹೊಸ್ಕೇರಾ ಸೇರಿ ಬಳ್ಳಾರಿ, ರಾಯಚೂರು, ವಿಜಯನಗರ, ಕೊಪ್ಪಳ ಜಿಲ್ಲೆಯ ಪ್ರತಿನಿಧಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net