ಬಾಕಿಯಿರುವ ಶೇ. 75ರಷ್ಟು ಬೆಳೆವಿಮೆ ಬಿಡುಗಡೆಗೊಳಿಸಲು ಆಗ್ರಹಿಸಿ; ರೈತರಿಂದ ಪ್ರತಿಭಟನೆ

30-RNR-07
Published on

ರಾಣೆಬೆನ್ನೂರ: ಕಳೆದ ವರ್ಷ ಬರಗಾಲ ಘೋಷಣೆಯಾದ ಸಮಯದಲ್ಲಿ ವಿಮಾ ಕಂಪನಿಗಳು ಶೇ. 25ರಷ್ಟು ಬೆಳೆವಿಮೆ ಬಿಡುಗಡೆ ಮಾಡಿದ್ದು, ಬಾಕಿಯಿರುವ ಶೇ. 75ರಷ್ಟು ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದ ಬಸ್​ ನಿಲ್ದಾಣದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ರೈತ ಸಂದ ರಾಜ್ಯ ಸಂಟನಾ ಕಾರ್ಯದಶಿರ್ ರವೀಂದ್ರಗೌಡ ಪಾಟೀಲ ಮಾತನಾಡಿ, ಸರ್ಕಾರ ಬರಗಾಲ ಕುರಿತು ಅಧಿಕೃತ ಘೋಷಣೆ ಮಾಡಿದಾಗ ವಿಮಾ ಕಂಪನಿಗಳು ತಕ್ಷಣವೇ ಶೇ. 25ರಷ್ಟು ಬೆಳೆವಿಮೆ ಬಿಡುಗಡೆ ಮಾಡಿದ್ದವು. ಆದರೆ, ಬಾಕಿಯಿರುವ ಶೇ. 75ರಷ್ಟು ಪರಿಹಾರವನ್ನು ನಂತರ ಕೊಡುವ ಬದಲು ಇಲ್ಲಸಲ್ಲದ ಆರೋಪ ಹೇಳಿ ಜಾರಿಕೊಳ್ಳುತ್ತಿವೆ.
ಅಲ್ಲದೆ ರೈತರು ಆಗ ಪ್ರತಿಭಟನೆ ನಡೆಸಿದ ಸಮಯದಲ್ಲಿ ಶೇ. 75ರಷ್ಟು ಬೆಳೆವಿಮೆ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಈವರೆಗೂ ರೈತರಿಗೆ ಬೆಳೆವಿಮೆ ನೀಡದೆ ಮೋಸ ಮಾಡುತ್ತಿವೆ. ಆದ್ದರಿಂದ ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಬೆಳೆವಿಮೆ ಬಿಡುಗಡೆ ಮಾಡಿಸಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ತೀವ್ರತರನಾದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಸ್ಥಳಕ್ಕೆ ಬಂದ ತಹಸೀಲ್ದಾರ್​ ಗುರುಬಸವರಾಜ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ರೈತ ಮುಖಂಡರಾದ ಯಲ್ಲಪ್ಪ ಓಲೇಕಾರ, ಸುರೇಶ ಮಲ್ಲಾಪುರ, ವಿರುಪಾಗೌಡ ಪಾಟೀಲ, ಸುಶೀಲಮ್ಮ ಅಮರಾವತಿ, ತಿಪ್ಪಣ್ಣ ಜೋಗಿ, ವಿಶ್ವನಾಥ ಕೆಂಪಣ್ಣನವರ, ಚಂದ್ರಪ್ಪ ಕೆಂಪಣ್ಣನವರ, ಕೆ.ವಿ. ರುದ್ರಮುನಿ, ಎಂ.ಬಿ. ಸಂದಿಮನಿ, ಹರಿಹರಗೌಡ ಪಾಟೀಲ, ಬಸವರಾಜ ಯಲ್ಲಕ್ಕನವರ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net