ವಿವಿಧ ಕ್ಷೇತ್ರಗಳಿಂದ ನಿವೃತ್ತರಾದವರಿಗೆ ಬೀಳ್ಕೊಡುಗೆ

sahyadri
ಸೇವೆಯಿಂದ ನಿವೃತ್ತರಾದ ಡಾ. ಕೆ. ಪ್ರಭಾಕರರಾವ್, ಎಲ್.ಎನ್.ಶಾಂತರಾಜು, ವಿ.ಕೆ.ನಾಗೇಶ್, ಎನ್.ಟಿ.ಸುರೇಶ್, ಸುರೇಶ್, ತೇಜಾನಾಯ್ಕ ಅವರನ್ನು ಸನ್ಮಾನಿಸಲಾಯಿತು. ಯುವಕುಮಾರ್, ಇ.ಎನ್.ಹರಿಯಪ್ಪ, ಡಾ. ಕೆ.ಎನ್.ಮಂಜುನಾಥ್ ಇತರರಿದ್ದರು.
Published on

ಶಿವಮೊಗ್ಗ: ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದವರನ್ನು ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಕೆ.ಎನ್.ಮಂಜುನಾಥ್, ಮಾಚೇನಹಳ್ಳಿ ಕೆಎಸ್‌ಆರ್‌ಪಿ ಎಸ್ಪಿ ಯುವಕುಮಾರ್ ಹಾಗೂ ಗೆಳೆಯರು ಸನ್ಮಾನಿಸಿ ಬೀಳ್ಕೊಟ್ಟರು.

ಹೊಸನಗರ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಕೆ. ಪ್ರಭಾಕರ ರಾವ್, ಕುವೆಂಪು ವಿವಿ ಹಿರಿಯ ಸಹಾಯಕ ಎಲ್.ಎನ್.ಶಾಂತರಾಜು, ಬಸವಾನಿ ಪಿಯು ಕಾಲೇಜಿನ ಉಪನ್ಯಾಸಕ ವಿ.ಕೆ.ನಾಗೇಶ್, ಕಮ್ಮರಡಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಎನ್.ಟಿ.ಸುರೇಶ್, ಉಪಾಧ್ಯಾಯ ಸುರೇಶ್, ಸಹಕಾರ ವಲಯದ ತೇಜಾನಾಯ್ಕ ಅವರನ್ನು ಬೀಳ್ಕೊಡಲಾಯಿತು.

ಸನ್ಮಾನಿತರ ಪರವಾಗಿ ಡಾ. ಕೆ. ಪ್ರಭಾಕರ ರಾವ್ ಮಾತನಾಡಿ, ಸ್ನೇಹ ಎಂಬುದು ಅತಿ ಮಧುರ. ಅದು ಕಾಲ, ದೇಶವನ್ನೂ ಮೀರಿದ್ದು. ನಾವೆಲ್ಲರೂ ಸುಮಾರು 35 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇವೆ. ವೃತ್ತಿ ಜೀವನ ನಮಗೆ ತೃಪ್ತಿ ತಂದಿದೆ ಎಂದರು.

ಮಾಳೂರು ಹಿರೇಗೋಡಿನ ಕೃಷಿಕ ಇ.ಎನ್.ಹರಿಯಪ್ಪ, ಎನ್‌ಇಎಸ್ ಪ್ರೌಢಶಾಲೆಯ ಉಪ ಪ್ರಾಚಾರ್ಯ ಚಿಕ್ಕಪೆಂಚಾಲಯ್ಯ, ಬಸವಾನಿ ಕಾಲೇಜಿನ ಪ್ರಾಚಾರ್ಯ ಕೆ.ಸಿ.ಪ್ರಕಾಶ್, ಚಿನ್ನ-ಬೆಳ್ಳಿ ವರ್ತಕ ಎಚ್.ಎನ್.ಮೋಹನ್, ಆನಂದಪುರ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಸುರೇಶ್ ನಾಯ್ಕ, ಭದ್ರಾವತಿ ಹಳೇನಗರ ಉರ್ದು ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಲಕ್ಷ್ಮಣ್, ಸಹ್ಯಾದ್ರಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಆರುಂಡಿ ಶ್ರೀನಿವಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net