ನಿವೃತ್ತ ಅಧಿಕಾರಿಗೆ ಬೀಳ್ಕೊಡುಗೆ

31-07-HNPP 0001
Published on

  • ಹೊಳೆನರಸೀಪುರ : ಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬರಿಗೂ ವಯೋಸಹಜ ನಿವೃತ್ತ ಸಾಮಾನ್ಯ ಎಂದು ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಹೇಳಿದರು.

  • ಬಿಸಿಎಂ ಅಧಿಕಾರಿ ಮಂಜುನಾಥ್ ಅವರ ವಯೋವೃತ್ತಿ ನಿವೃತ್ತಿ ಹಿನ್ನೆಲೆಯಲ್ಲಿ ಪಟ್ಟಣದ ಬಿಸಿಎಂ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಬಿಳ್ಕೋಡುಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

  • ಮಂಜುನಾಥ್ ಅವರು ನಿವೃತ್ತಿ ಆಗುತ್ತಿರುವುದು ತಮಗೆ ಹಾಗೂ ತಮ್ಮಂತ ಸಮಾನ ಮನಸ್ಕರಿಗೆ ಬೇಸರ ತಂದಿದೆ, ಮಂಜುನಾಥ್ ಅವರು ಮತ್ತಷ್ಟು ಕಾಲ ಬಿಸಿಎಂ ಅಧಿಕಾರಿ ಆಗಿ ಕರ್ತವ್ಯದಲ್ಲಿ ಇದ್ದಿದ್ದರೆ ಮತ್ತಷ್ಟು ಮಕ್ಕಳಿಗೆ ಅನುಕೂಲ ಆಗುತ್ತಿತ್ತು ಎಂದು ಮೆಚ್ಚುಗೆ ನುಡಿಗಳನ್ನಾಡಿದರು.

  • ತಾಲೂಕು ಪಂಚಾಯಿತಿಯ ತಾಂತ್ರಿಕ ಅಧಿಕಾರಿ ಗೋಪಾಲ್, ಸಹಾಯಕ ಕೃಷಿ ಅಧಿಕಾರಿ ಸಪ್ನಾ, ಎಚ್.ಡಿ.ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಜಿ.ಡಿ.ನಾರಾಯಣ್ ಮಾತನಾಡಿದರು. ಜಿಲ್ಲಾ ಬಿಸಿಎಂ ಅಧಿಕಾರಿ ಉಳ್ಳಗಡ್ಡಿ , ಗೃಹ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಆಶಾಜ್ಯೋತಿ, ತಾಪಂ ಅಧಿಕಾರಿ ಕುಸುಮಧರ್ , ಜಿಲ್ಲಾ ಪಂಚಾಯಿತಿ ನೀರು ಸರಬರಾಜು ಅಧಿಕಾರಿ ಪ್ರಶಾಂತ್, ಸಮಾಜಕಲ್ಯಾಣ ಅಧಿಕಾರಿ ಕೌಸರ್ ಅಹಮದ್ , ಸಿಡಿಪಿಒ ಜ್ಯೋತಿಲಕ್ಷ್ಮೀ,ಮಂಜುನಾಥ್ ಅವರ ತಂದೆ ಜವರಯ್ಯ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net