ಸಿ.ಎಸ್.ಮನೋಹರ್‌ಗೆ ಬೀಳ್ಕೊಡುಗೆ

ಸಿ.ಎಸ್.ಮನೋಹರ್‌ಗೆ ಬೀಳ್ಕೊಡುಗೆ
Published on

ಹುಣಸೂರು: ತಾಲೂಕಿನ ಕೊಯಮುತ್ತೂರು ಕಾಲನಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್.ಮನೋಹರ್ ನಿವೃತ್ತಿಯಾದ ಹಿನ್ನೆಲೆಯಲ್ಲಿ ಸೋಮವಾರ ಅಭಿನಂದನೆ ಸಲ್ಲಿಸಿ ಬೀಳ್ಕೊಡಲಾಯಿತು.

ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಘದ ನಿರ್ದೇಶಕ ಎಚ್.ಪಿ.ಅಮರನಾಥ್, ಮನೋಹರ್ ಉತ್ತಮ ಸೇವೆ ಸಲ್ಲಿಸಿದ್ದಾರೆ. ಆಡಳಿತ ಮಂಡಳಿ, ಸಹಕಾರ ಇಲಾಖೆಯ ಅಧಿಕಾರಿಗಳ ಹಾಗೂ ನೌಕರರ ಸಹಕಾರ ಪಡೆದು ಉತ್ತಮ ಸೇವೆಗಳನ್ನು ರೈತಾಪಿ ವರ್ಗಕ್ಕೆ ತಲುಪಿಸಿ ತಾಲೂಕಿನಲ್ಲಿ ಅತ್ಯುತ್ತಮ ಸಹಕಾರ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರ ಶಿಸ್ತು, ಸಾಮಾಜಿಕ ಬದ್ಧತೆ ಕಾರ್ಯವೈಖರಿ ಉತ್ತಮವಾಗಿದ್ದು ಇವರು ಇತರ ನೌಕರರಿಗೆ ಆದರ್ಶರಾಗಿದ್ದಾರೆಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮನೋಹರ್, ಸಹಕಾರ ಸಂಘದಿಂದ ಸಿಗುವ ಸರ್ಕಾರದ ಎಲ್ಲ ಸೇವೆಗಳನ್ನು ರೈತಾಪಿ ಜನರಿಗೆ ತಲುಪಿಸಿರುವ ತೃಪ್ತಿ ನನಗಿದೆ ಎಂದರು. ಸಹಕಾರ ಸಂಘದ ಉಪಾಧ್ಯಕ್ಷ ವಿ.ರವಿ, ನಿರ್ದೇಶಕರಾದ ಚಿನ್ನಸ್ವಾಮಿ, ರಾಜೇಂದ್ರ, ಮಹದೇವ್, ವೆಳ್ಳಂಗಿರಿ, ವಸಂತಮ್ಮ, ಗೌರಮ್ಮ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net