ಹೀಗಿದ್ದರೆ ಹೇಗೆ? ನೀವೀಗ ಉತ್ತರಿಸಲೇಬೇಕು! ನಟ ವಿಜಯ್‌ ದೇವರಕೊಂಡಗೆ ಫ್ಯಾನ್ಸ್​ ಒತ್ತಾಯ

WhatsApp Image 2024-04-11 at 1.38.44 PM
Published on

ಆಂಧ್ರಪ್ರದೇಶ: ಸದಾ ಒಂದಲ್ಲ ಒಂದು ವಿಚಾರಕ್ಕೆ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗುವ ತೆಲುಗು ನಟ ವಿಜಯ್ ದೇವರಕೊಂಡಗೆ ಇದೀಗ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಒಂದು ವಿಷಯವನ್ನು ಮುನ್ನೆಲೆಗೆ ತಂದಿದ್ದು, ತಮಗೆ ಉತ್ತರ ನೀಡುವಂತೆ ಒತ್ತಾಯಿಸಿದ್ದಾರೆ.

ಏಪ್ರಿಲ್ 05ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಂಡ ವಿಜಯ್ ದೇವರಕೊಂಡ ಮತ್ತು ನಟಿ ಮೃಣಾಲ್ ಠಾಕೂರ್ ಅಭಿನಯದ ಫ್ಯಾಮಿಲಿ ಸ್ಟಾರ್ ಚಿತ್ರವು ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸುವಲ್ಲಿ ವಿಫಲವಾಗಿದೆ. ರಿಲೀಸ್ ಆದ ಮೊದಲ ದಿನದಿಂದಲೂ ಉತ್ತಮ ಓಪನಿಂಗ್ ಪಡೆಯದ ಚಿತ್ರಕ್ಕೆ ಭಾರೀ ಹಿನ್ನೆಡೆ ಎದುರಾಗಿದೆ. ಬಿಡುಗಡೆಯಾದ ಮೊದಲ ವಾರವೇ ಹಲವು ಚಿತ್ರಮಂದಿರಗಳಿಂದ ವಿಜಯ್​ ಸಿನಿಮಾವನ್ನು ತೆಗೆದುಹಾಕಲಾಗಿದೆ.

ಇದು ಚಿತ್ರತಂಡಕ್ಕೆ ಭಾರೀ ಆಘಾತ ತಂದೊಡ್ಡಿದ್ದು, ಅಭಿಮಾನಿಗಳು ಸಹ ಶಾಕ್ ಆಗಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಬಗ್ಗೆ ಎಲ್ಲಿಯೂ ಮಾತನಾಡದ ವಿಜಯ್ ದೇವರಕೊಂಡ ಮೌನಕ್ಕೆ ಶರಣಾಗಿದ್ದಾರೆ. ಚಿತ್ರದ ಸೋಲಿನ ಹಿಂದಿರುವ ಕಾರಣವೇನು ಎಂಬುದರ ಬಗ್ಗೆ ತುಟಿಬಿಚ್ಚದ ನಟನ ವಿರುದ್ಧ ಇದೀಗ ಫ್ಯಾನ್ಸ್ ಅಸಮಾಧಾನ ಹೊರಹಾಕಿದ್ದಾರೆ. ಚಿತ್ರದ ವೈಫಲ್ಯದ ಬಗ್ಗೆ ನೀವು ಪ್ರತಿಕ್ರಿಯಿಸಬೇಕೆಂದು ಮನವಿ ಮಾಡಿದ್ದಾರೆ.

ನಿಮ್ಮ ಈ ಮೌನವು ಎಲ್ಲರನ್ನೂ ಕೊಲ್ಲುತ್ತಿದೆ. ಇದಕ್ಕೆ ನೀವು ಉತ್ತರಿಸಲೇಬೇಕು ಎಂದು ಪ್ರಶ್ನಿಸಿದ್ದಾರೆ. ವಿಜಯ್ ದೇವರಕೊಂಡ ಸುತ್ತಲೂ ನೆಗೆಟಿವ್ ಆವರಿಸಿಕೊಂಡಿರುವ ಕಾರಣ ಅವರ ಚಿತ್ರಗಳು ಬಗ್ಗೆ ಕೊಂಚ ನಕಾರಾತ್ಮಕ ವಿಷಯಗಳು ಕೇಳಿಬಂದರೆ ಸಾಕು ಅದೆಲ್ಲವೂ ಟ್ರೋಲ್ ಆಗುತ್ತದೆ. ಚಿತ್ರದ ಸೋಲಿಗೆ ಫ್ಯಾಮಿಲಿ ಸ್ಟಾರ್ ನಿರ್ದೇಶಕ ಪರಶುರಾಮ್ ಕೂಡ ಈಗ ಟಾರ್ಗೆಟ್​ ಆಗಿದ್ದಾರೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net