More

    ಬಲವಂತದ ಮದುವೆಗೆ ಒಪ್ಪದ ಈ ನಟಿ, ಐಟಂ ಸಾಂಗ್​ಗಳಿಂದಲೇ ಫೇಮಸ್​; ಇಂದಿಗೂ ಈಕೆಯ ಸಾವು ನಿಗೂಢ!

    ದಕ್ಷಿಣ ಚಿತ್ರರಂಗದಲ್ಲಿ ಅನೇಕ ನಟಿಯರು ಭಾಷೆಯ ತಡೆಗೋಡೆಯನ್ನು ಮೀರಿ ಪ್ಯಾನ್ ಇಂಡಿಯಾ ನಟಿಯರಾಗಿ ಮಿಂಚುತ್ತಾರೆ. ಅಂದಿನ ಕಾಲಕ್ಕೆ ಜಯಲಲಿತಾ, ರೇಖಾ, ಶ್ರೀದೇವಿ, ಜಯಪ್ರದಾ ಮುಂತಾದ ನಟಿಮಣಿಯರ ಹೆಸರುಗಳು ಹೆಚ್ಚು ಪ್ರಚಲಿತ. 80ರ ದಶಕದಲ್ಲಿ ಈ ನಟಿಯರು ಮಾಡಿದ ಮೋಡಿಗೆ ಪ್ರೇಕ್ಷಕರು ಚಿತ್ರಮಂದಿರಗಳಿಗೆ ನುಗ್ಗಿ ಸಿನಿಮಾ ನೋಡುತ್ತಿದ್ದರು. ಅಷ್ಟರ ಮಟ್ಟಿಗೆ ಜನಪ್ರಿಯತೆ ಗಳಿಸಿದ್ದರು ಈ ಕಲಾವಿದರು.

    ಇದನ್ನೂ ಓದಿ: 40 ವಿದ್ಯಾರ್ಥಿಗಳಿದ್ದ ಶಾಲಾ ಬಸ್​ ಪಲ್ಟಿ, ಆರು ಮಕ್ಕಳು ಸಾವು

    ಆದರೆ, ಸ್ಟಾರ್​ ನಟಿಮಣಿಯರ ಮಧ್ಯೆ ಐಟಂ ಸಾಂಗ್​ಗಳಿಗೆ ಮೈಬಿಚ್ಚಿ ಕುಣಿಯುತ್ತಿದ್ದ ಕಲಾವಿದರು ಬಹಳ ಕಡಿಮೆ. ಒಂದು ಚಿತ್ರಕ್ಕೆ ಬಂದವರು ಮುಂದಿನ ಚಿತ್ರದಲ್ಲಿ ಕಣ್ಮರೆಯಾಗುತ್ತಿದ್ದರು. ಅಂತಹ ಕಠಿಣ ಕಾಲಘಟ್ಟದಲ್ಲಿ ಊಹೆಗೂ ಮೀರಿ, ಹೆಸರು ಗಳಿಸಿದ್ದು ಈ ನಟಿ ಮಾತ್ರ ಎಂದು ಹೇಳಿದರೆ ತಪ್ಪಾಗಲಾರದು. ಅಮಿತಾಬ್​ ಬಚ್ಚನ್, ಕಮಲ್ ಹಾಸನ್, ರಾಜ್​ಕುಮಾರ್​ ಹೀಗೆ ಸ್ಟಾರ್​ ನಟರ ಸಿನಿಮಾಗಳಲ್ಲಿ ಟಾಪ್ ನಾಯಕಿಯರಾಗಿ ಮಿಂಚುತ್ತಿದ್ದ ನಟಿಮಣಿಯರಿಗಿಂತ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದವರು ಇವರೊಬ್ಬರೆ.

    ಒಂದು ಸಿನಿಮಾಗೂ ನಾಯಕಿಯಾಗಿ ಕೆಲಸ ಮಾಡದ ಈ ನಟಿ, ಕೇವಲ ಐಟಂ ಸಾಂಗ್​ಗಳಲ್ಲಿ ಜಬರ್​ದಸ್ತ್​ ಆಗಿ ಕುಣಿಯುವ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸುತ್ತಿದ್ದರು. ಅಧಿಕ ಸಂಖ್ಯೆಯ ಹಾಟ್​ ಸಾಂಗ್​ಗಳಲ್ಲಿ ಕಾಣಿಸಿಕೊಂಡ ಈಕೆ, ಸಿನಿಪಯಣದಲ್ಲಿ ಮಿಂಚಿದರು. ಆದರೆ, ನಿಜ ಜೀವನದಲ್ಲಿ ಚಿತ್ರಹಿಂಸೆ ಅನುಭವಿಸಿದವರು. 80ರ ದಶಕದಲ್ಲಿ ಮಲಯಾಳಂ, ತಮಿಳು, ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದ ನಟಿ ಬೇರಾರು ಅಲ್ಲ ಸಿಲ್ಕ್ ಎಂದೇ ಖ್ಯಾತಿ ಗಳಿಸಿದ್ದ ಸಿಲ್ಕ್​ ಸ್ಮಿತಾ.

    ಇದನ್ನೂ ಓದಿ: Basanagouda patil Yatnal; ಕಾಂಗ್ರೆಸ್​ ಮೇಲೆ ಗಂಭೀರ ಆರೋಪ ಮಾಡಿದ ಯತ್ನಾಳ್!

    1979ರಲ್ಲಿ ಬಿಡುಗಡೆಯಾದ ವಂದಿಚಕ್ಕರಂನಲ್ಲಿ ಕಾಣಿಸಿಕೊಂಡ ಸಿಲ್ಕ್ ಸ್ಮಿತಾರ ಹುಟ್ಟಿದ ಹೆಸರು ವಿಜಯಲಕ್ಷ್ಮಿ ವಡ್ಲಪಟ್ಟಿ. ಚಿತ್ರರಂಗದಲ್ಲಿ ಅವರಿಗೆ ಸಿಕ್ಕ ಸಿಲ್ಕ್ ಎಂಬ ಪಟ್ಟ ಅವರ ಕೊನೆಯುಸಿರುವವರೆಗೂ ಹಾಗೆಯೇ ಕರೆಯುವಂತೆ ಮಾಡಿತು. 1979-96ರ ಅವಧಿಯಲ್ಲಿ 400 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಸ್ಮಿತಾ ಕೆಲಸ ಮಾಡಿದ್ದಾರೆ. ಕನ್ನಡದಲ್ಲಿ ನಟ ವಿ. ರವಿಚಂದ್ರನ್ ಅಭಿನಯದ ಹಳ್ಳಿಮೇಷ್ಟ್ರು ಸಿನಿಮಾದಲ್ಲಿ ಶಿಕ್ಷಕಿಯ ಪಾತ್ರದಲ್ಲಿ ಸ್ಮಿತಾ ಕನ್ನಡಿಗರಿಗೆ ಪರಿಚಿತರಾದರು.

    ಸಿಲ್ಕ್ ಸ್ಮಿತಾ ಅವರ ಆರಂಭಿಕ ಜೀವನ: 1960ರಲ್ಲಿ ಆಂಧ್ರಪ್ರದೇಶದ ಎಲೂರಿನಲ್ಲಿ ವಿಜಯಲಕ್ಷ್ಮಿ ವಡ್ಲಪಾಟಿ (ಸ್ಮಿತಾ) ಜನಿಸಿದರು. ನಟಿಗೆ ಹದಿಹರೆಯದ ವಯಸ್ಸಿನಲ್ಲಿ ಬಲವಂತದ ಮದುವೆ ಮಾಡಲು ಮುಂದಾದ ಪೋಷಕರಿಂದ ತಪ್ಪಿಸಿಕೊಂಡ ಸ್ಮಿತಾ, 70ರ ದಶಕದ ಕೇರಳಕ್ಕೆ ತೆರಳಿ, ನಟಿ ಅಪರ್ಣಾಗೆ ಟಚ್​ ಅಪ್​ ಕಲಾವಿದೆಯಾಗಿ ಚಿತ್ರರಂಗದಲ್ಲಿ ಕೆಲವು ಸಮಯ ಕೆಲಸ ಮಾಡಿದರು. ತದನಂತರ ಸಿನಿಮಾಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳು ಅವರನ್ನು ಅರಸಿ ಬಂದವು. ನಟಿಗೆ ಮಾರ್ಗದರ್ಶನ ನೀಡಿದ ವಿನು ಚಕ್ರವರ್ತಿ, ಆಕೆಗೆ ತಮಿಳು, ನೃತ್ಯ ಮತ್ತು ನಟನೆಯನ್ನು ಕಲಿಸುವವರೆಗೂ ಜತೆಯಲ್ಲಿದ್ದು, ‘ವಂದಿಚಕ್ಕರಂ’ ಸಿನಿಮಾದಲ್ಲಿ ಪರಿಚಯಿಸಿದರು.

    ಇದನ್ನೂ ಓದಿ: ಪ್ರಿಯಾಂಕಾಗೆ ರಾಜಕೀಯವಾಗಿ ಸೇವೆ ಸಲ್ಲಿಸಲು ಅನುವು ಮಾಡಿಕೊಡಿ-ಸಚಿವ ಸತೀಶ ಜಾರಕಿಹೊಳಿ‌ ವಿನಂತಿ

    ಸಿಲ್ಕ್ ಸ್ಮಿತಾ ನಿಗೂಢ ಸಾವು: 90ರ ದಶಕದಲ್ಲಿ ಸ್ಮಿತಾ ಮೊದಲಿನಷ್ಟು ಜನಪ್ರಿಯವಾಗಿಲ್ಲದಿದ್ದರೂ ತಮ್ಮ ಕೆಲಸಗಳನ್ನು ಮಾಡಿಕೊಂಡಿದ್ದರು. ಆದರೆ, ಸೆಪ್ಟೆಂಬರ್ 22, 1996ರಂದು ತಮ್ಮ ಸ್ನೇಹಿತೆ ಅನುರಾಧಾಗೆ ಕರೆ ಮಾಡಿದ ನಟಿ, ನಿನ್ನೊಂದಿಗೆ ಕೆಲವು ಗಂಭೀರ ಸಮಸ್ಯೆಯ ಬಗ್ಗೆ ಮಾತನಾಡಬೇಕು ಎಂದು ಹೇಳುತ್ತಾರೆ. ಆದರೆ, ಮರುದಿನ ಬೆಳಗ್ಗೆ, ತಾನು ತಂಗಿದ್ದ ಹೋಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗುತ್ತಾರೆ. ಇದು ಆತ್ಮಹತ್ಯೆ ಎಂದು ಪೊಲೀಸರು ವರದಿ ನೀಡುತ್ತಾರೆ. ನಟಿ ಸಾವನ್ನಪ್ಪಿದಾಗ ಅವರ ವಯಸ್ಸು ಕೇವಲ 35!

    ನಟಿಯ ವಸ್ತುಗಳಲ್ಲಿ ಅಡಗಿದ್ದ ಡೆತ್​ನೋಟ್​ ಪತ್ತೆಹಚ್ಚಿದ ಪೊಲೀಸರು ಅದರಲ್ಲಿ ತಿಳಿಸಿರುವುದು ಏನು ಎಂಬುದನ್ನು ತಿಳಿಯಲು ವಿಫಲರಾದರು. ಅದೂ ಸಹ ನಿಗೂಢವಾಗಿಯೇ ಉಳಿಯಿತು. ಸ್ಮಿತಾ ಅವರ ಆತ್ಮಹತ್ಯೆಗೆ ಕಾರಣವೇನು ಎಂಬುದನ್ನು ನಿರ್ಧರಿಸಲು ಪೊಲೀಸರಿಗೆ ಸಾಧ್ಯವೇ ಆಗಲಿಲ್ಲ. ನಟಿಯ ಸಾವು ಇಂದಿಗೂ ನಿಗೂಢವಾಗಿಯೇ ಉಳಿದಿದೆ,(ಏಜೆನ್ಸೀಸ್).

    ಎಕ್ಕೆ ಎಲೆ ನೋಡಿ ರೈತರು ಹೇಳ್ತಾರೆ ಭವಿಷ್ಯ! ಇದು ಯುಗಾದಿ ಹಬ್ಬದಂದು ಮಾತ್ರ ಸಾಧ್ಯ…

    ಆರ್​ಸಿಬಿ ಮ್ಯಾನೆಜ್​ಮೆಂಟ್​ಗೆ ಬುದ್ದಿ ಕಲಿಸಲು ಮುಂದಾದ್ರು ಫ್ಯಾನ್ಸ್​! ಹೀಗೆ ಮಾಡೋದೇ ಸರಿ ಅಂತಿದ್ದಾರೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts