VIDEO| ಭದ್ರತೆಯನ್ನು ಲೆಕ್ಕಿಸದೆ ತಮನ್ನಾ ಜತೆ ಫೋಟೋ ತೆಗೆಸಿಕೊಳ್ಳಲು ಮುಂದಾದ ಅಭಿಮಾನಿ; ಮುಂದೇನಾಯ್ತು?

Tamannah kerala Event
Published on

ತಿರುವನಂತಪುರಂ: ಇತ್ತೀಚಿನ ದಿನಗಳಲ್ಲಿ ಮಿಲ್ಕಿ ಬ್ಯೂಟಿ, ನಟಿ ತಮನ್ನಾ ಭಾಟಿಯಾ ಹೆಚ್ಚು ಸುದ್ದಿಯಲ್ಲಿದ್ದು, ಅವರು ನಟಿಸಿರುವ ವೆಬ್​ ಸೀರೀಸ್​ ಹಾಗೂ ಚಿತ್ರಗಳು ಅಪಾರ ಯಶಸ್ಸನ್ನು ಗಳಿಸುವ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನೂ ಹೊಂದಿದ್ದಾರೆ.

ಇನ್ನೂ ಅಭಿಮಾನಿಗಳ ವಿಚಾರಕ್ಕೆ ಬರುವುದಾದರೆ ತಮ್ಮ ನೆಚ್ಚಿನ ನಟ/ನಟಿ ಜೊತೆ ಒಂದು ಫೋಟೋ ತೆಗೆಸಿಕೊಳ್ಳಲು ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ ಎಂಬುದಕ್ಕೆ ಕೇರಳದ ಕೊಲ್ಲಂನಲ್ಲಿ ಸೋಮವಾರ ನಡೆದ ಘಟನೆ ಮತ್ತೊಂದು ಸಾಕ್ಷಿಯಾಗಿದೆ.

ಸೋಮವಾರ ಕೇರಳದ ಕೊಲ್ಲಂನಲ್ಲಿ ಮಳಿಗೆಯೊಂದರ ಉದ್ಘಾಟನೆಗೆ ಆಗಮಿಸಿದ್ದ ನಟಿ ತಮನ್ನಾರನ್ನೂ ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ಅಲ್ಲಿದ್ದ ಅಭಿಮಾನಿಯೋರ್ವ ಬಿಗಿ ಭದ್ರತೆಯನ್ನೂ ಲೆಕ್ಕಿಸದೆ ಬ್ಯಾರಿಕೇಟ್​ಗಳನ್ನೂ ಹಾರಿ ನಟಿಯ ಜೊತೆ ಮಾತನಾಡಲು ಮುಂದಾಗಿದ್ದಾನೆ.

ಆತನನ್ನೂ ಕಂಡು ಒಂದು ಕ್ಷಣಕ್ಕೆ ನಟಿ ಗಾಬರಿಯಾಗಿದ್ದಾರೆ. ಬಳಿಕ ಅವರ ಕೈಹಿಡಿಯಲು ಆತ ಮುಂದಾಗಿದ್ದು, ಇದಕ್ಕೆ ಆಸ್ಪದ ಕೊಡದ ನಟಿ ಬಳಿಕ ಆತನ ಜೊತೆ ಫೋಟೋಗೆ ಪೋಸ್​ ನೀಡಿ ಮುಂದಕ್ಕೆ ತೆರಳಿದ್ದಾರೆ. ಇದಾದ ಬಳಿಕ ಕಾರ್ಯಕ್ರಮದ ಭದ್ರತೆಗಾಗಿ ನೇಮಿಸಿದ್ದ ಬೌನ್ಸರ್​ ಹಾಗೂ ಅಭಿಮಾನಿಗಳ ನಡುವೆ ವಾಗ್ವಾದವಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net