ಕಾರು ಪಲ್ಟಿಯಾಗಿ ಹೆಡ್​ಕಾನ್ಸ್​ಟೇಬಲ್​ ಮೃತ್ಯು

Deceased Head Constable
Published on

ಕಲಬುರಗಿ: ಚಲಿಸುವ ವೇಳೆ ಟೈರ್​ ಸ್ಪೋಟಗೊಂಡು ಕಾರು ಪಲ್ಟಿಯಾದ ಪರಿಣಾಮ ಹೆಡ್​ಕಾನ್ಸ್​ಟೇಬಲ್ ಒಬ್ಬರು​ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಲಬುರಗಿ ಜಿಲ್ಲೆ ಸೇಡಂ ತಾಲ್ಲೂಕಿನ ಮಳಖೇಡ ಬಳಿ ನಡೆದಿದೆ.

ಕಲಬುರಗಿಯ ಅಶೋಕ್​ ನಗರ ಪೊಲೀಸ್​ ಠಾಣೆಯಲ್ಲಿ ಹೆಡ್​ಕಾನ್ಸ್​ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಮೊಯಿಜುದ್ದೀನ್​(52) ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

Deceased Head Constable

ಕಲಬುರಗಿಯಿಂದ ಮಳಖೇಡದತ್ತ ಹೆಡ್​ಕಾನ್ಸ್​​ಟೇಬಲ್​ ಮೊಯಿಜುದ್ದೀನ್​ ತಮ್ಮ ಸಹೋದರ ನಜುಮೊದ್ದಿನ್ ಹಾಗೂ ಇನ್ನಿಬ್ಬರ​ ಜೊತೆ ಕಾರಿನಲ್ಲಿ ತೆರಳುತ್ತಿದ್ದರು. ಮಳಖೇಡ ಪೆಟ್ರೋಲ್​ ಬಂಕ್​ ಬಳಿ ಚಲಿಸುವ ವೇಳೆ ಟೈರ್​ ಸ್ಪೋಟಗೊಂಡ ಪರಿಣಾಮ ಕಾರು ಪಲ್ಟಿಯಾಗಿದ್ದು, ತೀವ್ರವಾಗಿ ಗಾಯಗೊಂಡಿದ್ದ ಮೊಯಿಜುದ್ದೀನ್​ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ನಜುಮೊದ್ದಿನ್​ ಸೇರಿದಂತೆ ಇನ್ನಿಬ್ಬರು ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಮಳಖೇಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net