ಶ್ರೀರಾಮ ದೇವರ ವಸ್ತ್ರ ವಿನ್ಯಾಸದ ಜವಾಬ್ದಾರಿ ಪ್ರಸಿದ್ಧ ದರ್ಜಿ ಲಾಲ್ ಕುಟುಂಬದ ಹೆಗಲಿಗೆ

rama mandira
Published on

ಅಯೋಧ್ಯೆ: ಶ್ರೀರಾಮ ಮಂದಿರ ದೇವಾಲಯದ ಭೂಮಿ ಪೂಜೆಗೆ ಕೆಲವೇ ದಿನಗಳು ಬಾಕಿ ಇರುವಂತೆ, ಪಟ್ಟಣದ ಪ್ರಸಿದ್ಧ ದರ್ಜಿ ಅಂಗಡಿಯೊಂದಕ್ಕೆ ಶ್ರೀರಾಮ ದೇವರ ವಸ್ತ್ರ ಹೊಲಿಯುವ ಜವಾಬ್ದಾರಿ ನೀಡಲಾಗಿದೆ.

ಅಯೋಧ್ಯೆಯ ಬಡಿ ಕುಟಿಯಾ ಪ್ರದೇಶದಲ್ಲಿ ನೆಲೆಗೊಂಡಿರುವ ‘ಬಾಬು ಲಾಲ್ ಟೈಲರ್ಸ್’ ದರ್ಜಿ ಅಂಗಡಿ

ಭಗವತ್ ಪ್ರಸಾದ್ ಮತ್ತು ಶಂಕರ್ ಲಾಲ್ ಎಂಬ ಇಬ್ಬರು ಸಹೋದರರು ನಡೆಸುತ್ತಿದ್ದಾರೆ.

ಪ್ರಸಾದ್ ಮತ್ತು ಲಾಲ್ ಕುಟುಂಬ ದಶಕಗಳಿಂದ ವಿಶೇಷವಾಗಿ ಅಯೋಧ್ಯೆಯ ಶ್ರೀರಾಮ ಮತ್ತು ಇತರ ದೇವಾಲಯಗಳ ದೇವತೆಗಳಿಗೆ ವಸ್ತ್ರ ವಿನ್ಯಾಸಗೊಳಿಸುತ್ತಿದೆ.

ದರ್ಜಿ ವೃತ್ತಿಯಲ್ಲಿ ಕುಟುಂಬದ ನಾಲ್ಕನೇ ತಲೆಮಾರಿನವರಾದ ಪ್ರಸಾದ್ ಮತ್ತು ಲಾಲ್ ಅವರು ಮುಂದಿನ ತಿಂಗಳ ಕಾರ್ಯಕ್ರಮಕ್ಕಾಗಿ ರಾಮ ದೇವರಿಗೆ ಉಡುಪು ಸಿದ್ಧಪಡಿಸುತ್ತಿದ್ದಾರೆ. ಭೂಮಿ ಪೂಜಾ ಕಾರ್ಯಕ್ರಮಕ್ಕೆ ರಾಮ ದೇವರಿಗೆ ಹಸಿರು ಬಣ್ಣದ ಉಡುಪನ್ನು ಸಿದ್ಧಪಡಿಸಲಾಗುತ್ತಿದೆ ಎಂದು ದರ್ಜಿಯೊಬ್ಬರು ತಿಳಿಸಿದ್ದಾರೆ.

ವಾರದ ವಿವಿಧ ದಿನಗಳಲ್ಲಿ ಶ್ರೀ ರಾಮನನ್ನು ಅಲಂಕರಿಸಲು ವಿಭಿನ್ನ ಬಣ್ಣದ ಬಟ್ಟೆಗಳನ್ನು ಬಳಸಲಾಗುತ್ತದೆ. ಸೋಮವಾರ ಬಿಳಿ ಬಟ್ಟೆಯಿಂದ ಅಲಂಕರಿಸಿದರೆ, ಮಂಗಳವಾರ ಕೆಂಪು, ಬುಧವಾರ ಹಸಿರು, ಗುರುವಾರ ಕಿತ್ತಳೆ ಬಣ್ಣದ, ಶುಕ್ರವಾರ ಕೆನೆ ಬಣ್ಣದ, ಶನಿವಾರ ನೀಲಿ ಮತ್ತು ಭಾನುವಾರ ಗುಲಾಬಿ ಬಣ್ಣದ ವಸ್ತ್ರಗಳಿಂದ ಅಲಂಕರಿಸಲಾಗುತ್ತದೆ.

ಹಸಿರು ಮತ್ತು ಕೇಸರಿ/ಕಿತ್ತಳೆ ಎರಡು ಬಣ್ಣದ ಉಡುಪು ವಿನ್ಯಾಸಕ್ಕೆ ಆದೇಶವನ್ನು ಸ್ವೀಕರಿಸಿರುವುದಾಗಿ ಭಗವತ್ ಪ್ರಸಾದ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net