ಖ್ಯಾತ ಬಾಲಿವುಡ್​ ನಟನ ತಂದೆ ಇನ್ನಿಲ್ಲ!

pandit p khurana
Published on

ದೆಹಲಿ: ಖ್ಯಾತ ಬಾಲಿವುಡ್​ ನಟ ಆಯುಷ್ಮಾನ್ ಖುರಾನಾ ಅವರ ತಂದೆ ಪಿ. ಖುರಾನಾ ಇಹಲೋಕವನ್ನು ತ್ಯಜಿಸಿದ್ದಾರೆ. ತೀವ್ರ ಅನಾರೋಗ್ಯ ಹಿನ್ನೆಲೆಯಲ್ಲಿ ಅವರನ್ನು ಎರಡು ದಿನಗಳ ಹಿಂದೆ ಪಂಜಾಬ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಪಿ. ಖುರಾನಾ ಇಂದು ಮೃತಪಟ್ಟಿದ್ದು, ಅವರು ತಮ್ಮ ಪತ್ನಿ ಮತ್ತು ಪುತ್ರರಾದ ಆಯುಷ್ಮಾನ್ ಮತ್ತು ಅಪರಶಕ್ತಿಯನ್ನು ಅಗಲಿದ್ದಾರೆ.

ಈ ಕುರಿತು ಅಪರಶಕ್ತಿಯ ವಕ್ತಾರರು ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಈ ಪ್ರೀತಿಯ ವ್ಯಕ್ತಿಯ ನಿಧನವು ಖುರಾನಾ ಕುಟುಂಬ ಮತ್ತು ಅವರ ಅಭಿಮಾನಿಗಳಿಗೆ ತೀವ್ರ ದುಃಖವನ್ನುಂಟು ಮಾಡಿದೆ ಎಂದಿದ್ದಾರೆ. ಅವರ ಸಾವಿನ ಸುದ್ದಿಯನ್ನು ಕೇಳಿ ಬಾಲಿವುಡ್​ ತಾರೆಯರು, ಗಣ್ಯರು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

ಪಂಡಿತ್ ಪಿ.ಖುರಾನಾ ಅವರು ಜ್ಯೋತಿಷ್ಯ ಕ್ಷೇತ್ರದಲ್ಲಿ ಪರಿಣತಿಯನ್ನು ಹೊಂದಿದ್ದು, ಅವರು ಈ ಕುರಿತು ಹಲವಾರು ಪುಸ್ತಕಗಳನ್ನು ಬರೆದು ಹೆಸರುವಾಸಿಯಾಗಿದ್ದರು. ಅವರ ಈ ಸಾವಿನ ಸುದ್ದಿ ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ. ಇವರ ಅಂತ್ಯಕ್ರಿಯೆ ಇಂದು ಸಂಜೆ 5.30ಕ್ಕೆ ಚಂಡೀಗಢದ ಮಣಿಮಜ್ರಾ ಸ್ಮಶಾನದಲ್ಲಿ ನೆರವೇರಲಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net