

ಮುಂಬೈ: ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ ಅವರ ತಾಯಿ ನಿರ್ಮಲ್ ಕಪೂರ್ ಅವರು 90 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣದಿಂದಾಗಿ ಕಳೆದ ಒಂದು ವಾರದಿಂದ ಅವರನ್ನು ಮುಂಬೈನ ಕೊಕಿಲಾಬೆನ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು (2) ಮೃತಪಟ್ಟಿದ್ದಾರೆ.
ಅನಿಲ್ ಕಪೂರ್, ಬೋನಿ ಕಪೂರ್ ಮತ್ತು ಸಂಜಯ್ ಕಪೂರ್ ಅವರ ತಾಯಿ ನಿರ್ಮಲ್ ಕಪೂರ್ ನಿಧನರಾಗಿದ್ದು, ಈ ಹಠಾತ್ ಸುದ್ದಿ ಈ ಮೂವರಿಗೆ ಮಾತ್ರವಲ್ಲದೆ ಅವರ ಅಭಿಮಾನಿಗಳಿಗೂ ಆಘಾತವನ್ನುಂಟು ಮಾಡಿದೆ.
ನಿರ್ಮಲ್ ಕಪೂರ್ ಅವರಿಗೆ 90 ವರ್ಷ ವಯಸ್ಸಾಗಿತ್ತು. ಈ ಸುದ್ದಿಯಿಂದ ಬಾಲಿವುಡ್ನಲ್ಲಿ ಶೋಕದ ಅಲೆ ಎದ್ದಿದೆ. ಕಳೆದ ಒಂದು ವಾರದಿಂದ ಅವರನ್ನು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಇಂದು ಅವರು ಈ ಲೋಕಕ್ಕೆ ವಿದಾಯ ಹೇಳಿದ್ದಾರೆ.
(ಏಜೆನ್ಸೀಸ್)
ಕಳೆದ ವರ್ಷ ಸೆಪ್ಟೆಂಬರ್ 27 ರಂದು ಅವರ 90 ನೇ ಹುಟ್ಟುಹಬ್ಬ ಆಚರಿಸಲಾಗಿತ್ತು. ಆ ಸಂದರ್ಭದಲ್ಲಿ ಅನಿಲ್ ಕಪೂರ್ ತಮ್ಮ ತಾಯಿಯೊಂದಿಗೆ ಇರುವ ಅನೇಕ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಆ ಚಿತ್ರಗಳಲ್ಲಿ ಅನಿಲ್ ಜೊತೆ ಸಂಜಯ್ ಮತ್ತು ಬೋನಿ ಕಪೂರ್ ಕೂಡ ಕಾಣಿಸಿಕೊಂಡಿದ್ದರು.