ರಿಕವರಿಗೆ ಬಂದ ಪೊಲೀಸರನ್ನು ಕೂಡಿ ಹಾಕಿದ ಚಿನ್ನದಂಗಡಿ ಮಾಲೀಕನ ಕುಟುಂಬ ಸದಸ್ಯರು!

New Project (9)
ಆರೋಪಿ ಮಹಮದ್ ಖಾನ್
Published on

ಚಿಕ್ಕಬಳ್ಳಾಪುರ: ಕಳ್ಳತನವಾದ ಚಿನ್ನ ವಶಪಡಿಸಿಕೊಳ್ಳಲು ಬಂದ ತಮಿಳುನಾಡು ಪೊಲೀಸರನ್ನು ಚಿನ್ನದಂಗಡಿಯವರು ಕೂಡಿ ಹಾಕಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಚಿನ್ನದ ಅಂಗಡಿ ಮಾಲೀಕ ಅತುಲ್ ಎಂಬಾತನಿಗೆ ಕಳ್ಳ ಮಹಮದ್ ಖಾನ್ ಕದ್ದ ಚಿನ್ನವನ್ನು ಮಾರಾಟ ಮಾಡಿದ್ದ. ಈ ವಿಚಾರದಲ್ಲಿ ಈಗಾಗಲೇ ಎರಡು ಬಾರಿ ಬೆಂಗಳೂರಿನ ಬೇರೆ ಬೇರೆ ಠಾಣೆಗಳ ಪೊಲೀಸರು ಚಿನ್ನದಂಗಡಿಗೆ ದಾಳಿ ಮಾಡಿ 200 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದರು.

ಚಿನ್ನದ ಅಂಗಡಿ ಮಾಲೀಕ ಅತುಲ್
ಚಿನ್ನದ ಅಂಗಡಿ ಮಾಲೀಕ ಅತುಲ್

ಈಗ ಮತ್ತೆ ಅದೇ ಕಳ್ಳನನ್ನು ತಮಿಳುನಾಡು ಪೊಲೀಸರು ಚಿನ್ನ ವಶಪಡಿಕೊಳ್ಳುವುದಕ್ಕಾಗಿ ಕರೆದುಕೊಂಡು ಬಂದಿದ್ದಾರೆ. ಆದರೆ ಅತುಲ್ ಶಾಶ್ವತವಾಗಿ ಅಂಗಡಿಯನ್ನು ಮುಚ್ಚಿ ಬೇರೆ ಊರಿಗೆ ಸ್ಥಳಾಂತರಗೊಂಡಿದ್ದ. ಈ ಹಿಂದೆ ಕಳ್ಳ ಚಿನ್ನ ಮಾರಲು ಬಂದಾಗ ಅತುಲ್ ಜತೆ, ಆತನ ಮಾವ ಶ್ರೀನಿವಾಸ್ ಇದ್ದರಂತೆ. ಹೀಗಾಗಿ ಪೊಲೀಸರು ಆತನ ಮಾವನನ್ನೇ ವಶಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಇದರಿಂದ ರೊಚ್ಚಿಗೆದ್ದ ಕುಟುಂಬಸ್ಥರು ಪೊಲೀಸರನ್ನು ಮತ್ತು ಅವರ ಜತೆ ಬಂದಿದ್ದ ಕಳ್ಳನನ್ನು ಕೂಡಿ ಹಾಕಿದ್ದಾರೆ.

ಪೊಲೀಸರು ಬಂದಿದ್ದ ವಾಹನದ ಟಯರ್​ನ ಗಾಳಿ ತೆಗೆದು ಆಕ್ರೋಶ ಹೊರ ಹಾಕಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಚಿಕ್ಕಬಳ್ಳಾಪುರ ಪೊಲೀಸರು, ಕಳ್ಳನನ್ನು ಮತ್ತು ತಮಿಳುನಾಡು ಪೊಲೀಸರನ್ನು ಬಿಡಿಸಿ ತಮಿಳುನಾಡಿಗೆ ವಾಪಸ್ ಕಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net