ರಿಕ್ಷಾ-ಟ್ರಕ್ ನಡುವೆ ಭೀಕರ ಅಪಘಾತ​; ಒಂದೇ ಕುಟುಂಬದ ಇಬ್ಬರು ಸಾವು, 3 ಮಂದಿಗೆ ತೀವ್ರ ಗಾಯ

dead
Published on

ಉತ್ತರಪ್ರದೇಶ: ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-2 ರಲ್ಲಿ ಟ್ರಕ್​ ಮತ್ತು ಆಟೋ ನಡುವೆ ಭೀಕರ ಅಪಗಾತವೊಂದು ಸಂಭವಿಸಿದೆ. ಇಟಾವಾದ ರಾಷ್ಟ್ರೀಯ ಹೆದ್ದಾರಿ-2ರಲ್ಲಿ ಘಟನೆ ನಡೆದಿದ್ದು, ರಿಕ್ಷಾಕ್ಕೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಇಬ್ಬರು ಸಾವನ್ನಪ್ಪಿದ್ದಾರೆ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.


ತಡರಾತ್ರಿ ಘಟನೆ ನಡೆದಿದ್ದು, ಮುಂದೆ ಚಲಿಸುತ್ತಿದ್ದ ರಿಕ್ಷಾಕ್ಕೆ ಹಿಂದಿನಿಂದ ವೇಗವಾಗಿ ಬಂದ ಟ್ರಕ್​​​ ಡಿಕ್ಕಿ ಹೊಡೆದಿದೆ. ಕ್ಷಣಾರ್ಧದಲ್ಲೇ ನಡೆದ ಅಪಘಾತದಲ್ಲಿ, 45 ವರ್ಷದ ವ್ಯಕ್ತಿ ಯೂನಸ್ ಮತ್ತು ಅವರ 13 ವರ್ಷದ ಮಗ ಸೊಹೈಲ್ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮೂವರಿಗೆ ತೀವ್ರ ಗಾಯಗಳಾಗಿದ್ದು, ಗಾಯಗೊಂಡವರನ್ನ ರುಖ್ಸಾರ್, ಕಾಸಿಂ ಮತ್ತು ಸಲೀಂ ಎಂದು ಗುರುತಿಸಲಾಗಿದೆ.


ರಿಕ್ಷಾದಲ್ಲಿ ಚಲಿಸುತ್ತಿದ್ದ ಒಂದೇ ಕುಟುಂಬದ 6 ಮಂದಿ ಎಕ್ದಿಲ್‌ನಿಂದ ಇಟಾವಾಗೆ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಎಸ್​​​ಎಚ್​​ಒ ಕುಮಾರ್​ ಹೇಳಿದ್ದಾರೆ.


ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಯಾವುದೇ ವ್ಯಕ್ತಿಯನ್ನ ಬಂಧಿಸಿಲ್ಲ. ಘಟನೆಯ ಕುರಿತಂತೆ ವಿಚಾರಣೆ ನಡೆಸುತ್ತಿದ್ದೇವೆ ಎಂದು ಇಟಾವಾ ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net