ಕೆಲಸದಲ್ಲಿ ಒತ್ತಡ ನಿಭಾಯಿಸಿದರೆ ಖ್ಯಾತಿ

police
ಸೊರಬ ಠಾಣೆಯಿಂದ ವರ್ಗಾವಣೆಯಾದ ಪಿಎಸ್‌ಐ ಮಾಳಪ್ಪ ಹಾಗೂ ಹೆಡ್ ಕಾನ್‌ಸ್ಟೆಬಲ್ ಕುಮಾರ್ ಅರಳಿಕಟ್ಟೆ ಅವರನ್ನು ಹಾಗೂ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ನಾಗರಾಜ್, ಶಿವಾನಂದ್, ವಿಠಲ್ ಅಗಸಿ ಇತರರಿದ್ದರು.
Published on

ಸೊರಬ: ಪೊಲೀಸ್ ಇಲಾಖೆಯಲ್ಲಿ ಒತ್ತಡ ಮೀರಿ ಕೆಲಸ ಮಾಡಿದಾಗ ಹೆಸರು ಗಳಿಸಲು ಸಾಧ್ಯ ಎಂದು ಸೊರಬ ಸಿಪಿಐ ರಮೇಶ್ ರಾವ್ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಭಾನುವಾರ ವರ್ಗವಣೆಯಾದ ಪಿಎಸ್‌ಐ ಹಾಗೂ ಪೊಲೀಸ್ ಸಿಬ್ಬಂದಿಗೆ ಬೀಳ್ಕೊಡುಗೆ ಹಾಗೂ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಸನ್ಮಾನಿಸಿ ಮಾತನಾಡಿದ ಅವರು, ಬರಹಗಾರ ಹಾಗೂ ತನಿಖೆ ಸಹಾಯಕರು ಠಾಣೆಗೆ ಜೋಡೆತ್ತುಗಳಿದ್ದಂತೆ. ಅವರ ತೀಕ್ಷ್ಣವಾದ ಬುದ್ಧಿವಂತಿಕೆ ಇಲಾಖೆ ಸುಸೂತ್ರವಾಗಿ ನಡೆದುಕೊಂಡು ಹೋಗಲು ಸಹಕಾರಿಯಾಗುತ್ತದೆ ಎಂದರು.
ಹೆಣ್ಣು ಮಕ್ಕಳನ್ನು ಸಮಾಜದಲ್ಲಿ ಗೌರವದಿಂದ ನಡೆಸಿಕೊಳ್ಳಬೇಕು. ಮಹಿಳೆ ಇಂದು ಎಲ್ಲ ಕ್ಷೇತ್ರದಲ್ಲೂ ಪುರುಷನಿಗೆ ಸಮಾನವಾಗಿ ಬೆಳೆದಿದ್ದಾರೆ. ರಾಜಕೀಯ, ಶೈಕ್ಷಣಿಕ, ಔದ್ಯೋಗಿಕ ಸ್ಥಾನಮಾನಗಳು ಲಭಿಸಿವೆ. ಸಮಾಜದಲ್ಲಿ ಗುರುತಿಸುವ ಕೆಲಸ ಆದಾಗ ಮಾತ್ರ ಮತ್ತಷ್ಟು ಸಾಧನೆ ಮಾಡಲು ಅವರನ್ನು ಪ್ರೇರೇಪಿಸಿದಂತಾಗುತ್ತದೆ ಎಂದು ತಿಳಿಸಿದರು.
ಸೊರಬ ಪಿಎಸ್‌ಐ ನಾಗರಾಜ್ ಮಾತನಾಡಿದರು. ಆನವಟ್ಟಿ ಪಿಎಸ್‌ಐಗಳಾದ ಶಿವಾನಂದ್, ವಿಠಲ್ ಅಗಸಿ, ಸಿಬ್ಬಂದಿ ಶಿವರಾಜ್, ಶಶಿಕುಮಾರ್, ವಿನಯ್, ನಾಗೇಶ್, ಉಷಾ, ಹೇಮಲತಾ, ವಿನೋದಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net