ಸಿಎಂ ಹೆಸರಿನಲ್ಲಿ ನಕಲಿ ಸುದ್ದಿ ವೈರಲ್; ಪಶ್ಚಿಮ ಸಿಇಎನ್ ಠಾಣೆಯಲ್ಲಿ ಎಫ್ ಐಆರ್

mysore
Published on

ಬೆಂಗಳೂರು: ‘ಹಿಂದು ವೋಟ್ ಬೇಡ, ಮುಸ್ಲಿಂ ವೋಟ್ ಸಾಕು’ ಎಂದು ಸಿಎಂ ಸಿದ್ಧರಾಮಯ್ಯ ಹೇಳಿಕೆ ನೀಡಿದಿರುವುದಾಗಿ ಸುಳ್ಳು ಸುದ್ದಿ ತುಣುಕು ಹರಿಬಿಟ್ಟ ಸಂಬಂಧ ಪಶ್ಚಿಮ ಸಿಇಎನ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

ಕಾಂಗ್ರೆಸ್‌ನ ಹರೀಶ್ ನಾಗರಾಜು ಎಂಬುವರು, ಈ ಕುರಿತು ಬುಧವಾರ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಪ್ರಭಾಕರ್ ರೆಡ್ಡಿ, ವಸಂತ್ ಗಿಲ್ಲಿಯಾರ್, ಬಿಎಸ್‌ವೈ ಸಪೋಟರ್ಸ್‌, ದಾವಣಗೆರೆ ಬಿಜೆಪಿ ಸೇರಿ 7 ಮಂದಿಯ ವಿರುದ್ಧ ಎ್ಐಆರ್ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಪೊಲಿಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net