ಆಪರೇಷನ್ ಥಿಯೇಟರ್​ಗೆ​ ರೋಗಿಯನ್ನು ಕರೆದೊಯ್ದ ಡಾಕ್ಟರ್​ ಮಾಡಿದ್ದು ಬೇರೆಯದ್ದೇ ಕೆಲಸ! ನಕಲಿ ವೈದ್ಯನ ಕಾಮದಾಟ ಬಯಲು

oper
Published on

ಇಸ್ಲಾಮಾಬಾದ್: ವೈದ್ಯನಂತೆ ನಟಿಸುತ್ತಿದ್ದ ವ್ಯಕ್ತಿಯೊಬ್ಬ ಮಹಿಳಾ ರೋಗಿಯನ್ನು ಆಪರೇಷನ್ ಥಿಯೇಟರ್​ ಒಳಗೆ ಕರೆದೊಯ್ದು ಅತ್ಯಾಚಾರ ಮಾಡಲು ಪ್ರಯತ್ನಿಸಿರುವ ಘಟನೆ ಪಾಕಿಸ್ತಾನದ ಡೇರಾ ಘಾಜಿ ಖಾನ್​ನಲ್ಲಿ ನಡೆದಿದೆ.

ಮಹಿಳೆಯೊಬ್ಬಳಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆಯನ್ನು ಡೇರಾ ಘಾಜಿ ಖಾನ್​ನ ಬಾಲ್ಕ್ ಸರ್ವಾರ್ ನಗರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಆಕೆಯನ್ನು ಪರೀಕ್ಷೆ ಮಾಡಿದ ವೈದ್ಯ ಮಹಮ್ಮದ್ ಇಮ್ರಾನ್ ಅಲಿಯಾಸ್ ಇಶ್ತಿಯಾಕ್ ರೋಗಿಗೆ ಅಪೆಂಡಿಕ್ಸ್ ಇದೆ ಎಂದು ಆಕೆಯ ಕುಟುಂಬಸ್ಥರ ಎದುರು ಹೇಳಿದ್ದು. ತಕ್ಷಣ ಆಪರೇಷನ್ ಮಾಡಬೇಕೆಂದು ಆಕೆಯನ್ನು ಆಪರೇಷನ್ ಥಿಯೇಟರ್​ ಒಳಗೆ ಕರೆದುಕೊಂಡು ಹೋಗಿದ್ದ.

ಆಪರೇಷನ್ ಥಿಯೇಟರ್ ಒಳಗೆ ಆತ ಮಹಿಳೆಗೆ ನಿದ್ರಾಜನಕದ ಇಂಜೆಕ್ಷನ್ ಕೊಟ್ಟಿದ್ದಾನೆ. ಮಹಿಳೆ ಇನ್ನೇನು ನಿದ್ರೆಗೆ ಜಾರಬೇಕು ಎನ್ನುವಷ್ಟರಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸಿದ್ದಾನೆ. ಆದರೆ ಕೂಡಲೇ ಎಚ್ಚೆತ್ತುಕೊಂಡ ಮಹಿಳೆ ಜೋರಾಗಿ ಕೂಗಿಕೊಂಡಿದ್ದಾಳೆ. ಅದನ್ನು ಕೇಳಿದ ಆಕೆಯ ಗಂಡ ಮತ್ತು ತಂದೆ ಒಳಗೆ ಹೋಗಿ ನೋಡಿದ್ದಾರೆ. ಆಗ ಮಹಿಳೆ, ವೈದ್ಯ ತನ್ನ ಮೇಲೆ ಅತ್ಯಾಚಾರ ಮಾಡಲು ಮುಂದಾಗಿದ್ದಾಗಿ ವಿವರಿಸಿದ್ದಾಳೆ.

ಈ ವಿಚಾರವಾಗಿ ಪೊಲೀಸರಲ್ಲಿ ದೂರು ನೀಡಲಾಗಿದೆ. ಆರೋಪಿ ಸ್ಥಾನದಲ್ಲಿರುವ ವೈದ್ಯ ಮಹಮ್ಮದ್ ಇಮ್ರಾನ್ ಹೆಸರಿನಲ್ಲಿ ಆಸ್ಪತ್ರೆಯಲ್ಲಿ ಯಾವುದೇ ವೈದ್ಯರು ಇಲ್ಲವೇ ಇಲ್ಲ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಆತ ಬೇಕೆಂದಲೇ ವೈದ್ಯನಂತೆ ನಟಿಸಿ ಈ ಕೆಲಸ ಮಾಡಿರುವುದಾಗಿ ಹೇಳಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net