

ನವದೆಹಲಿ: ಮಹಾರಾಷ್ಟ್ರ ಮೂಲದ ನಕಲಿ ಕರೆನ್ಸಿ ಸಿಂಡಿಕೇಟ್ಗಳು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಂತಹ ಸಾಮಾಜಿಕ ಮಾಧ್ಯಮಗಳ ಮೂಲಕ ಕಾರ್ಯನಿರ್ವಹಿಸುತ್ತಿರುವುದನ್ನು ಸೈಬರ್ ಗುಪ್ತಚರ ಸಂಸ್ಥೆ ಕ್ಲೌಡ್ಸೆಕ್ ಪತ್ತೆ ಹಚ್ಚಿದೆ. ಈ ಸಿಂಡಿಕೇಟ್ಗಳು ಡಾರ್ಕ್ ವೆಬ್ ಮೂಲಕ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದವು. ಆದರೆ ಇತ್ತೀಚೆಗೆ ಬಹಿರಂಗವಾಗಿಯೇ ಕಾರ್ಯ ನಿರ್ವಹಿಸುತ್ತಿವೆ.
ಕಳೆದ ಆರು ತಿಂಗಳಲ್ಲಿ 17.5 ಕೋಟಿ ರೂ. ಮೌಲ್ಯದ ನಕಲಿ ಕರೆನ್ಸಿಯ ಪ್ರಸರಣ ಮಾಡಲಾಗಿದೆ. ಈ ಕೃತ್ಯಕ್ಕೆ ಕಾರಣವಾದ 4,500ಕ್ಕೂ ಹೆಚ್ಚು ಪೋಸ್ಟ್ಗಳು, 750 ಖಾತೆ, 410 ಫೋನ್ ನಂಬರ್ ಗುರುತಿಸಲಾಗಿದೆ. ಫೇಸ್ ರೆಕಗ್ನಿಷನ್, ಜಿಪಿಎಸ್ ಡೇಟಾ ಮತ್ತು ಡಿಜಿಟಲ್ ಫಾರೆನ್ಸಿಕ್ಸ್ ತಂತ್ರಜ್ಞಾನ ಬಳಸಿ ಕ್ಲೌಡ್ಸೆಕ್ ಸ್ಟ್ರೈಕ್ ತಂಡ ಆರೋಪಿಗಳನ್ನು ಗುರುತಿಸಿದ್ದು, ಈ ಮಾಹಿತಿ ಯನ್ನು ಕಾನೂನು ಜಾರಿ ಸಂಸ್ಥೆಗಳಿಗೆ ಒದಗಿಸಿದೆ.