ಮೊಳೆ ಹೊಡೆದರೆ ದೋಷ ದೂರ, ಕಮಿಷನ್ ಕೊಡದಿದ್ದರೆ ಶಾಪ: ಏನಿದು ವಿಚಿತ್ರ ಪ್ರಕರಣ..?

nail
Published on

ವಿಜಯವಾಡ: ಮೊಳೆ ಹೊಡೆದರೆ ದೋಷ ನಿವಾರಣೆಯಾಗುತ್ತದೆ ಎಂಬ ಬಾಬಾರ ಮಾತನ್ನು ನಂಬಿ ಮಹಿಳೆಯೊಬ್ಬರು ಮೋಸ ಹೋಗಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡದ ಬಳಿ ನಡೆದಿದೆ.

ವಿಜಯವಾಡ ಮೂಲದ ಸುಂಕರ ರಜಿನಿ ಅವರು ಮಚಲಿಪಟ್ಟಣದ ಇನಕುದೂರು ಎಂಬಲ್ಲಿ ನಿವೇಶನ ಖರೀದಿಸಿದ್ದಾರೆ. ರೂ.35 ಲಕ್ಷಕ್ಕೆ ಖರೀದಿಸಿದ ಜಮೀನು ಮಾರಾಟವಾಗದ ಹಿನ್ನೆಲೆಯಲ್ಲಿ ಮತ್ತೊಬ್ಬ ಭಕ್ತ ಮೌಲಾಲಾ ಎಂಬ ದರೋಡೆಕೋರ ಬಾಬಾನನ್ನು ರಜನಿಗೆ ಪರಿಚಯಿಸಿದ್ದಾನೆ.

ಇದನ್ನೂ ಓದಿ: ರಾತ್ರಿಯಿಡೀ ಕಷ್ಟಪಟ್ಟು ಎಟಿಎಂ ಮುರಿದ ಕಳ್ಳರು: ಕೊನೆಗೆ ಪೆಚ್ಚು ಮೋರೆ ಹಾಕಿಕೊಂಡು ಹೋದ್ರು..

ಬಳಿಕ ಮಹಿಳೆಯು ನಕಲಿ ಬಾಬಾನ ಕಡೆಗೆ ಹೋಗಿದ್ದು ಆತ ಸ್ಥಳವನ್ನು ಮಾರಾಟ ಮಾಡಬೇಕಾದರೆ ಅಲ್ಲಿ ಪೂಜೆ ಮಾಡಿ ನಾಲ್ಕು ಮೂಲೆಗಳಲ್ಲಿ ನಾಲ್ಕು ಮೊಳೆಗಳನ್ನು ಹೊಡೆಯಬೇಕು ಎಂದು ಹೇಳಿದ್ದ. ಇದಕ್ಕೊಪ್ಪಿದ ಮಹಿಳೆಯು ಆತನಿಗೆ ಪೂಜೆಗಾಗಿ ಎರಡೂವರೆ ಲಕ್ಷ ರೂ.ಗಳನ್ನು ನೀಡಿದ್ದು, ಆ ಬಳಿಕ ಆತ ನಾಲ್ಕು ಮೊಳೆಗಳನ್ನು ಹೊಡೆದಿದ್ದಾನೆ.

ಇದಾದ ಬಳಿಕ ನಕಲಿ ಬಾಬ ತನ್ನ ನಿಜವಾದ ನಾಟಕವನ್ನು ಪ್ರಾರಂಭಿಸಿದ್ದು, ಜಮೀನು ಮಾರಾಟ ಮಾಡಿದ ನಂತರ 4 ಲಕ್ಷ ರೂಪಾಯಿ ಕಮಿಷನ್ ಕೊಡದಿದ್ದರೆ ಶಾಪ ಹಾಕುವುದಾಗಿ ಬೆದರಿಸತೊಡಗಿದ. ಕೊನೆಗೆ ತಾನು ಮೋಸ ಹೋಗಿರುವುದನ್ನು ಅರಿತ ಸಂತ್ರಸ್ತೆಯು ಪೊಲೀಸರಿಗೆ ದೂರು ನೀಡಿದ್ದಾಳೆ. ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net