

ಪಾಲ್ಘರ್: ಎಟಿಎಂ ಮುರಿದು ಹಣ ಸಿಗದ ಹಿನ್ನೆಲೆಯಲ್ಲಿ ಕಳ್ಳರು ಬರಿಗೈಯಲ್ಲಿ ಹಿಂದಿರುಗಿದ ಘಟನೆ ಮಹಾರಾಷ್ಟ್ರದ ಪಾಲ್ಘರ್ ತಾಲೂಕಿನ ಮಸ್ವಾನ್ ಗ್ರಾಮದಲ್ಲಿ ನಡೆದಿದೆ.
ಶುಕ್ರವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಕೆಲವು ದುಷ್ಕರ್ಮಿಗಳು ರಾಷ್ಟ್ರೀಕೃತ ಬ್ಯಾಂಕ್ನ ಎಟಿಎಂಗೆ ನುಗ್ಗಿದ್ದು, ಕೊಠಡಿಯೊಳಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾಕ್ಕೂ ಹಾನಿ ಮಾಡಿದ್ದಾರೆ. ಆ ಬಳಿಕ ಎಟಿಎಂ ಬಾಕ್ಸ್ ಒಡೆದಿದ್ದಲ್ಲದೆ, ಹಣ ಕದ್ದೊಯ್ಯಲು ಮುಂದಾಗಿದ್ದಾರೆ. ಆದರೆ ಅದೃಷ್ಟವಶಾತ್, ಎಟಿಎಂನಲ್ಲಿ ನಗದು ಇಲ್ಲದ ಕಾರಣ ಕಳ್ಳರು ಬರಿಗೈಯಲ್ಲಿ ಹಿಂದಿರುಗಿದ್ದಾರೆ.
ಎಟಿಎಂ ಯಂತ್ರವು ಕೆಟ್ಟಿದ್ದು, ಇದರಲ್ಲಿ ಬ್ಯಾಂಕ್ನ ಸಿಬ್ಬಂದಿ ಯಾವುದೇ ನಗದನ್ನು ಹಾಕಿರಲಿಲ್ಲ. ಇನ್ನು ಬೆಳಿಗ್ಗೆಯಾಗುತ್ತಲೇ ಇದನ್ನು ಗಮನಿಸಿದ ಜನರು ಪೊಲೀಸರಿಗೆ ಮಾಹಿತಿಯನ್ನು ತಲುಪಿಸಿದ್ದು, ಎಟಿಎಂ ದರೋಡೆಗೆ ಯತ್ನಿಸಿದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಕ್ಯಾಮರಾ ಜಖಂಗೊಂಡಿರುವ ಕಾರಣ ದುರ್ಷರ್ಮಿಗಳ ಗುರುತು ಇನ್ನು ಪತ್ತೆಯಾಗಿಲ್ಲ.(ಏಜೆನ್ಸೀಸ್)