ಮೊದಲ ಮತದಾನದಲ್ಲಿ ಹೊಸ ಪೋಪ್ಅನ್ನು ಆಯ್ಕೆ ಮಾಡುವಲ್ಲಿ ವಿಫಲ: ಇದಕ್ಕೆ ಸಂಕೇತವಾದ ಕಪ್ಪು ಹೊಗೆ!Black Smoke

Black Smoke
Published on

Black Smoke: ಸಿಸ್ಟೀನ್ ಚಾಪೆಲ್‌ (ಪೋಪ್​​ ಅಧೀಕೃತ ನಿವಾಸ)ನ್​ ಮೇಲಿರುವ ಚಿಮಣಿಯಿಂದ ದಟ್ಟವಾದ ಕಪ್ಪು ಹೊಗೆ ಕಾಣಿಸಿಕೊಂಡಿರುವ ಘಟನೆ ವ್ಯಾಟಿಕನ್​​ ಸಿಟಿಯಲ್ಲಿ ಬುಧವಾರ (ಮೇ.7) ನಡೆದಿದೆ.

ಈ ಕಪ್ಪು ಹೊಗೆಯ ಮೂಲಕ ಕಾರ್ಡಿನಲ್​​ಗಳ ಮೊದಲ ರಹಸ್ಯ ಸಭೆಯಲ್ಲಿ ಹೊಸ ಪೋಪ್​ ಆಯ್ಕೆ ಮಾಡುವಲ್ಲಿ ಸಭೆ ವಿಫಲವಾಗಿದೆ ಎಂಬುದರ ಸಂಕೇತವಾಗಿದೆ.

ರೋಮನ್ ಕ್ಯಾಥೋಲಿಕ್ ಚರ್ಚ್‌ನ ಪ್ರಧಾನ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರು ಏಪ್ರಿಲ್ 21ರಂದು ನಿಧನರಾಗಿದ್ದರು. ಹೀಗಾಗಿ ಅವರ ಸ್ಥಾನಕ್ಕೆ ಹೊಸ ಪೋಪ್ ಆಯ್ಕೆ ಮಾಡುವ ಸಂಬಂಧ ಚರ್ಚಿಸಲು ವಿಶ್ವದಾದ್ಯಂತ ಇರುವ ಕಾರ್ಡಿನಲ್‌ಗಳು ವ್ಯಾಟಿಕನ್ ಸಿಟಿಯಲ್ಲಿರುವ 'ಸಿಸ್ಟಿನ್ ಚಾಪೆಲ್'ನಲ್ಲಿ ಮೇ 7ರಂದು  ರಹಸ್ಯ ಸಭೆ ಸೇರಿದ್ದರು.

ಒಟ್ಟು ಇರುವ 252 ಕಾರ್ಡಿನಲ್‌ಗಳಲ್ಲಿ 80 ವರ್ಷದ ಒಳಗಿನವರು ಮಾತ್ರವೇ ಪೋಪ್ ಆಯ್ಕೆ ಚುನಾವಣೆಯಲ್ಲಿ ಮತ ಚಲಾಯಿಸಬಹುದಾಗಿದೆ. ಉಳಿದವರು, ಚರ್ಚೆಯಲ್ಲಷ್ಟೇ ಭಾಗವಹಿಸಲಿದ್ದಾರೆ. ಮೂರನೇ ಎರಡರಷ್ಟು ಮತ ಪಡೆಯುವವರು ಮುಂದಿನ ಪೋಪ್ ಆಗಲಿದ್ದಾರೆ. ಮತದಾನಕ್ಕೆ ಅರ್ಹತೆಯುಳ್ಳ ಒಟ್ಟು 135 ಕಾರ್ಡಿನಲ್‌ಗಳ ಪೈಕಿ ಇಬ್ಬರು ಆರೋಗ್ಯದ ಕಾರಣದಿಂದಾಗಿ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ವ್ಯಾಟಿಕನ್ ಸಿಟಿಯ ಕ್ಯಾಥೊಲಿಕ್ ಚರ್ಚ್‌ಗೆ ತಿಳಿಸಿದ್ದರು.

ಹೊಸ ಪೋಪ್ ಭೌಗೋಳಿಕ ರಾಜಕೀಯ ಅನಿಶ್ಚಿತತೆಯ ಸಮಯದಲ್ಲಿ ರಾಜತಾಂತ್ರಿಕ ಸಮತೋಲನ ಕ್ರಮಗಳನ್ನು ಎದುರಿಸಬೇಕಾಗುತ್ತದೆ, ಜೊತೆಗೆ ಚರ್ಚ್‌ನೊಳಗಿನ ಆಳವಾದ ಒಡಕುಗಳನ್ನು ಸಹ ಎದುರಿಸಬೇಕಾಗುತ್ತದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net