

Missile Parts Found : ಆಪರೇಷನ್ ಸಿಂಧೂರ್ ನಂತರ ಕಂಗಾಲಾಗಿದ್ದ ಪಾಕಿಸ್ತಾನ, ಪಂಜಾಬ್‌ನ ಹಲವಾರು ಭಾಗಗಳಲ್ಲಿ ಸ್ಫೋಟಗಳು ಮತ್ತು ಕೆಲವು ಅಪರಿಚಿತ ಸಾಧನಗಳು ಬಿದ್ದಿರುವ ವರದಿಗಳು ಬಂದವು. ಗಡಿಯಲ್ಲಿ ಗುಂಡು ಹಾರಿಸಿದ ನಂತರ, ಈಗ ಭಾರತದ ಮೇಲೆ 'ಕ್ಷಿಪಣಿ' ಹಾರಿಸಲು ಪ್ರಯತ್ನಿಸಿತು. ಪಾಕಿಸ್ತಾನದ ಕ್ಷಿಪಣಿ ದಾಳಿಯನ್ನು ಭಾರತ ವಿಫಲಗೊಳಿಸಿದೆ. ಪಾಕಿಸ್ತಾನದ ಕ್ಷಿಪಣಿಯನ್ನು ಗಾಳಿಯಲ್ಲಿ ಹೊಡೆದುರುಳಿಸಲಾಯಿತು.
ಪಾಕಿಸ್ತಾನ ಅಮೃತಸರದ ಮೇಲೆ ಕ್ಷಿಪಣಿ ದಾಳಿಗೆ ಯತ್ನಿಸಿದೆ ಎಂದು ವರದಿಯಾಗಿದೆ. ಆದರೆ, ಭಾರತೀಯ ಪಡೆಗಳು ಪಾಕಿಸ್ತಾನದ ಕ್ರಮಗಳನ್ನು ಹಿಮ್ಮೆಟ್ಟಿಸಿದವು. ಪಾಕಿಸ್ತಾನವು ಆಕಾಶದಲ್ಲಿ ಹಾರಿಸಿದ ಕ್ಷಿಪಣಿಯನ್ನು ಭಾರತೀಯ ಸೇನೆ ನಾಶಪಡಿಸಿತು. ಭಾರತವು ಕ್ಷಿಪಣಿ ವಿರೋಧಿ ವ್ಯವಸ್ಥೆಯ ಮೂಲಕ ಪಾಕಿಸ್ತಾನದ ದುಷ್ಕೃತ್ಯವನ್ನು ವಿಫಲಗೊಳಿಸಿದೆ. ಈ ಸಂದರ್ಭದಲ್ಲಿ ಅಮೃತಸರ ಬಳಿ ಪತನಗೊಂಡ ಕ್ಷಿಪಣಿಯ ತುಣುಕುಗಳನ್ನು ಸ್ಥಳೀಯರು ಗುರುತಿಸಿದರು.
ಈ ಕ್ಷಿಪಣಿ ತುಣುಕುಗಳು ಅಮೃತಸರದ ಮೂರು ಹಳ್ಳಿಗಳಲ್ಲಿ ಬಿದ್ದಿವೆ. ಅಮೃತಸರ ಗ್ರಾಮೀಣ ಎಸ್‌ಎಸ್‌ಪಿ ಮಣಿಂದರ್ ಸಿಂಗ್ ಇದನ್ನು ದೃಢಪಡಿಸಿದ್ದಾರೆ. ತಕ್ಷಣವೇ ಸೇನೆಗೆ ಮಾಹಿತಿ ನೀಡಲಾಯಿತು. ಘಟನಾ ಸ್ಥಳಕ್ಕೆ ಬಂದ ಮಿಲಿಟರಿ ತಂಡವು ಈ ಕ್ಷಿಪಣಿಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಯಿತು. ದುಧಲಾ, ಜೇತುವಾಲ್ ಮತ್ತು ಪಂಧೇರ್ ಗ್ರಾಮಗಳಲ್ಲಿ ಕ್ಷಿಪಣಿಯ ತುಣುಕುಗಳು ಪತ್ತೆಯಾಗಿವೆ.
ಅಮೃತಸರದಲ್ಲಿ ಕರೆಂಟ್ ಇಲ್ಲದೆ ಗುರುವಾರ ರಾತ್ರಿಯಿಡೀ ಕತ್ತಲೆಯಲ್ಲಿ ಮುಳುಗಿತ್ತು. ಮತ್ತೊಂದೆಡೆ, ಪಂಜಾಬ್ ಪೊಲೀಸ್ ಅಧಿಕಾರಿಗಳು ಮತ್ತು ನೌಕರರ ರಜೆಗಳನ್ನು ಸಹ ರದ್ದುಗೊಳಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯ ಮಧ್ಯೆ ಅಧಿಕಾರಿಗಳು ಪ್ರತಿ ಕ್ಷಣವೂ ಸಂಪೂರ್ಣ ಜಾಗರೂಕತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ.
ಮಂಗಳವಾರ ರಾತ್ರಿ ಬಟಿಂಡಾದ ಅಕಾಲಿಯಾ ಗ್ರಾಮದ ಗೋಧಿ ಹೊಲದಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಐದು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಇಲ್ಲಿ ಯುದ್ಧ ವಿಮಾನವೊಂದು ಪತನಗೊಂಡಿದೆ ಎಂದೂ ಹೇಳಲಾಗುತ್ತದೆ. ಆದಾಗ್ಯೂ, ಇದರ ಬಗ್ಗೆ ಸಂಪೂರ್ಣ ವಿವರಗಳು ಇನ್ನೂ ತಿಳಿದುಬಂದಿಲ್ಲ.
ಪಂಜಾಬ್‌ನ ಗಡಿಯ ಬಳಿಯ ಅಮೃತಸರದಲ್ಲಿ ಭಾರತದ ವಾಯು ರಕ್ಷಣಾ ವ್ಯವಸ್ಥೆಯು ಪಾಕಿಸ್ತಾನಿ ಕ್ಷಿಪಣಿಯನ್ನು ಹೊಡೆದುರುಳಿಸಿತು. ಈ ಸಮಯದಲ್ಲಿ ಪಾಕಿಸ್ತಾನವು ಭಾರತದಿಂದ ಸಂಪೂರ್ಣವಾಗಿ ಸೋಲನುಭವಿಸಿದೆ ಮತ್ತು 'ಆಪರೇಷನ್ ಸಿಂಧೂರ್' ನಂತರ, ಪಾಕಿಸ್ತಾನದ ಹತಾಶೆ ಉತ್ತುಂಗದಲ್ಲಿದೆ.