

ಶೃಂಗೇರಿ: ಭಾರತೀಯ ಸೇನೆಯ ಪರೀಕ್ಷೆಯಲ್ಲಿ ಅನುತೀರ್ಣನಾದ ಕಾರಣ ಮನನೊಂದು ಯುವಕನೋರ್ವ ಡೆತ್‌ನೋಟ್ ಬರೆದಿದ್ದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಸಂಜೆ ನಡೆದಿದೆ. ತಾಲೂಕಿನ ಕಿಗ್ಗಾ ಸಮೀಪದ ಯಡದಾಳು ಗ್ರಾಮದ ಕಾರ್ತಿಕ್(23) ಆತ್ಮಹತ್ಯೆ ಮಾಡಿಕೊಂಡ ಯುವಕ. ಕಳೆದ ಎರಡು ವರ್ಷದಿಂದ ಸಾಕಷ್ಟು ಶ್ರಮವಹಿಸಿ ಸೇನಾ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದರೂ ಅನುತೀರ್ಣರಾದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸೇನಾ ಪರೀಕ್ಷೆಯಲ್ಲಿ ನಾನು ವಿಲನಾಗಿದ್ದೇನೆ. ನನ್ನ ಮನೆಯವರಿಗೆ ೇಲ್ ಆದ ಕುರಿತು ಹೇಳುವ ಧೈರ್ಯ ನನಗಿರಲಿಲ್ಲ ಎಂದು ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಾನೆ. ಇವರಿಗೆ ತಾಯಿ ಮತ್ತು ಸಹೋದರ ಇದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಂತಿಮ ಕ್ರಿಯೆ ಮನೆಯ ಜಮೀನಿನ ಸಮೀಪ ಗುರುವಾರ ನಡೆಯಿತು.