ಆಟ ಆಡುವಾಗ ಮಗಳ ಮೇಲೆ ಬಿದ್ದ ಅಪ್ಪ! ಮತ್ತೆ ಉಸಿರಾಡಲೇ ಇಲ್ಲ ಮೂರು ವರ್ಷದ ಕಂದಮ್ಮ

daughter
Published on

ನ್ಯೂಜಿಲೆಂಡ್: ಮಕ್ಕಳೊಂದಿಗೆ ಆಟವಾಡುವುದು ಯಾವ ತಂದೆಗೆ ಇಷ್ಟವಾಗುವುದಿಲ್ಲ ಹೇಳಿ? ಅದೇ ರೀತಿ ಖುಷಿಯಿಂದ ಮಗಳೊಂದಿಗೆ ಆಟವಾಡುತ್ತಿದ್ದ ತಂದೆಯೊಬ್ಬ ಬ್ಲಾಲೆನ್ಸ್​ ತಪ್ಪಿ ಮಗಳ ಮೇಲೇ ಬಿದ್ದಿದ್ದು, ಪುಟ್ಟ ಕಂದಮ್ಮ ಪ್ರಾಣ ಬಿಟ್ಟಿರುವ ಘಟನೆ ನ್ಯೂಜಿಲೆಂಡ್​ನಲ್ಲಿ ನಡೆದಿದೆ.


ಅಂಬರ್ಲಿ ಮೂರು ವರ್ಷದ ಮಗು. ಆಕೆಯನ್ನು ಆಕೆಯ ತಂದೆ ರಾಬರ್ಟ್ ಫೋಲೆ ಅತ್ಯಂತ ಪ್ರೀತಿಯಿಂದ ಸಾಕುತ್ತಿದ್ದ. ಸಾಕಷ್ಟು ಆಟದ ಸಾಮಾಗ್ರಿಗಳನ್ನೂ ತಂದುಕೊಟ್ಟಿದ್ದ. ಅಂದು ಕೂಡ ಮಗಳ ಆಸೆಯಂತೆ ಆಕೆಯೊಂದಿಗೆ ಸೂಪರ್​ನೋವಾ ಆಟವಾಡಲು ಮುಂದಾಗಿದ್ದಾನೆ.


ಸೂಪರ್​ನೋವಾ ಆಟದಲ್ಲಿ ಒಂದು ವೃತ್ತಾಕಾರದ ಬೇಸ್​ ಇರುತ್ತದೆ. ಅದು ತಿರುಗಬಲ್ಲದ್ದಾಗಿದ್ದು, ಮಕ್ಕಳು ಅದರ ಮೇಲೆ ಒಂದೇ ಕಡೆ ನಿಂತು ಆ ಬೇಸ್​ ಅನ್ನು ತಿರುಗಿಸುತ್ತಾರೆ. ಎಷ್ಟು ಬ್ಯಾಲೆನ್ಸ್ ಮಾಡಬಲ್ಲಿರಿ ಎನ್ನುವುದೇ ಆ ಆಟದಲ್ಲಿ ಮುಖ್ಯ. ಅದೇ ರೀತಿಯ ಆಟವನ್ನು ರಾಬರ್ಟ್​ ಮಗಳೊಂದಿಗೆ ಶುರು ಮಾಡಿದ್ದಾನೆ. ಮಗಳನ್ನು ಬೇಸ್ ಮೇಲೆ ಕೂರಿಸಿ, ಇನ್ನೊಂದು ಕಡೆ ತಾನು ನಿಂತು ಅದನ್ನು ತಿರುಗಿಸಲಾರಂಭಿಸಿದ್ದಾನೆ. ಮುಂದೆ, ಹಿಂದೆ ಹೀಗೆ ತಿರುಗಿಸುತ್ತಾ ಮಗಳನ್ನು ನಗಿಲಸಾರಂಭಿಸಿದ್ದಾನೆ.


ಆಟವಾಡುತ್ತಿದ್ದ ರಾಬರ್ಟ್​ಗೆ ಇದ್ದಕ್ಕಿದ್ದಂತೆ ಬ್ಯಾಲೆನ್ಸ್ ತಪ್ಪಿದೆ. ಆತ ಒಂದೇ ಕಡೆ ವಾಲಿ ತನ್ನ ಮಗಳ ಮೇಲೆಯೇ ಬಿದ್ದಿದ್ದಾನೆ. ಅಪ್ಪ ಬಿದ್ದ ಹೊಡೆತಕ್ಕೆ ಮಗಳ ತಲೆಗೆ ಬಲವಾಗಿ ಹೊಡೆತ ಬಿದ್ದಿದೆ. ಈಗಿನ್ನೂ ಆಟ ಶುರು ಮಾಡಿದ್ದ ಮಗು ಅಲ್ಲೇ ಕೊನೆಯುಸಿರೆಳೆದಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net